ಕು. ಅಕ್ಷತಾ ಬಿ.ಕೆ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ

0

ಬೆಂಗಳೂರಿನ IT ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕು. ಬಿ.ಕೆ. ಅಕ್ಷತಾ ಉನ್ನತ ವ್ಯಾಸಂಗಕ್ಕಾಗಿ ಅ. 1ರಂದು ಜರ್ಮನಿಗೆ ತೆರಳಲಿದ್ದಾರೆ.
ಕು. ಬಿ.ಕೆ. ಅಕ್ಷತಾ ಮೈಸೂರಿನ ಎಸ್.ಜೆ.ಸಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ B.E ಪದವಿಯನ್ನು ಪಡೆದು ಬಳಿಕ ಬೆಂಗಳೂರಿನ IT ಕಂಪನಿಯಲ್ಲಿ SOFTWARE ENGINEER ಆಗಿ ಸೇವೆ ಸಲ್ಲಿಸಿ, ಇದೀಗ ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ UNIVERSITY OF STUTTGART ನಲ್ಲಿ INFORMATION TECHNOLOGY ವಿಷಯದಲ್ಲಿ M.S ಪದವಿ ಪಡೆಯಲು ಅ. 1ರಂದು ಜರ್ಮನಿಗೆ ತೆರಳಲಿದ್ದಾರೆ. ಇವರು ಮಂಗಳೂರಿನ ಎಂ.ಸಿ.ಎಫ್ ಸಂಸ್ಥೆಯಲ್ಲಿ Joint General Manager ಆಗಿ ನಿವೃತ್ತರಾದ ಎಡಮಂಗಲ ಗ್ರಾಮದ ಬಳಕ್ಕಬೆ ಕೃಷ್ಣಪ್ಪ ಮತ್ತು ಶ್ರೀಮತಿ ಬಿ.ಕೆ. ಭಾರತಿ ಕೃಷ್ಣಪ್ಪ ದಂಪತಿಯ ಪುತ್ರಿ. ಇವರ ಸಹೋದರಿ ಕು. ಬಿ.ಕೆ. ಅಶ್ಮಿತಾ ದ್ವಿತೀಯ M.B.B.S ವ್ಯಾಸಂಗ ಮಾಡುತ್ತಿದ್ದಾರೆ.