ಸುಳ್ಯದ ಶಾಝ್ ಬೇರಿ ಬೇಕರಿ ಮಾಲಕ ಮಹಮ್ಮದ್ ನಿಧನ

0

ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶಾಝ್ ಬೇರಿ ಬೇಕರಿ ಮಾಲಕ ಉದ್ಯಮಿ,ಕಾಸರಗೋಡು ತಾಲೂಕು ಅದೂರು ಪಡಿಯತ್ತಡ್ಕ ನಿವಾಸಿ ಮಹಮ್ಮದ್ ಅಲ್ಪಕಾಲದ ಅಸೌಖ್ಯದಿಂದ ಸೆ.29 ರಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ಇವರು ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಬೇಕರಿ ಉದ್ಯಮವನ್ನು ನಡೆಸುತ್ತಿದ್ದರು.