ಬೆಳ್ಳಾರೆ: ಸ್ನೇಹಿತರ ಕಲಾ ಸಂಘದ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ಳಾರೆಯ ಸ್ನೇಹಿತರ ಕಲಾಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 24ರಂದು ಸಂಘದ ಸಭಾಂಗಣ ಸ್ನೇಹ ಸದನದಲ್ಲಿ ಜರುಗಿತು ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಸಂತ ಗೌಡ ಪಡ್ಪು, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀನಿವಾಸ ಕುರುoಬುಡೇಲು ಸಭೆಗೆ ಮಂಡಿಸಿದರು. ಬಳಿಕ, ಗತ ವರ್ಷದ ಕಾರ್ಯಕ್ರಮದ ಅವಲೋಕನ ನಡೆಸಲಾಯಿತು, 2024-2025 ಸಾಲಿಗೆ ಯೋಜಿಸಿದ ನೂತನ ಕಾರ್ಯಕ್ರಮವನ್ನು ಅಂಗೀಕರಿಸಲಾಯಿತು.

ಶ್ರೀನಿವಾಸ ಕುರುಂಬುಡೇಲು
ಬಾಲಕೃಷ್ಣ ಪೂಜಾರಿ ತಡಗಜೆ
ಮಹಾಲಿಂಗ ಪಾಟಾಳಿ
ವಸಂತ ಗೌಡ ಪಡ್ಪು
ಗಣೇಶ್ ಪಾಟಾಳಿ ಕುರುo ಬುಡೆಲು

ನಂತರ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪದ್ಮನಾಭ ಬೀಡು, ಉಪಾಧ್ಯಕ್ಷರಾಗಿ ವಸಂತ ಗೌಡ ಪಡ್ಪು, ಕಾರ್ಯದರ್ಶಿ ಗಣೇಶ್ ಪಾಟಾಳಿ ಕುರುಂಬುಡೇಲು, ಕೋಶಾಧಿಕಾರಿಯಾಗಿ ಶ್ರೀನಿವಾಸ ಕುರುಂಬುಡೇಲು, ಜತೆ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ತಡಗಜೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಮಹಾಲಿಂಗ ಪಾಟಾಳಿ ಕುರುಂಬುಡೇಲು, ನಿಕಟಪೂರ್ವಧ್ಯಕ್ಷರಾಗಿ ವಸಂತ್ ಉಲ್ಲಾಸ್, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜನಾರ್ಧನ ಪೂಜಾರಿ ಚೀಮುಳ್ಳು, ಚಿದಾನಂದ ಪನ್ನೆ, ಸತೀಶ್ ಕುಮಾರ್ ಕಿಲoಗೋಡಿ, ತೀರ್ಥರಾಮ ಗುಡ್ಡೆಮನೆ,ಪದ್ಮನಾಭ ಚೂoತಾರು, ಸನತ್ ಕಲ್ಲೋಣಿ ಇವರುಗಳನ್ನು ಸದಸ್ಯರುಗಳ ಸೂಚನೆ ಮತ್ತು ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಯಿತು. ವಸಂತ ಗೌಡ ಪಡ್ಪು ಸ್ವಾಗತಿಸಿ, ಶ್ರೀನಿವಾಸ್ ಕುರುಂಬುಡೆಲು ವಂದಿಸಿದರು.