ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ: ಕೇರಂ ಸ್ಪರ್ಧೆ

0

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ.) ವತಿಯಿಂದ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಿಗೆ ಲೀಗ್ ಮಾದರಿಯ ಸ್ಪೋರ್ಟ್ಸ್ ಕ್ಲಬ್ ನ ಕೊಠಡಿಯಲ್ಲಿ ಸೆ.29 ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪವನ್ ಪಲ್ಲತ್ತಡ್ಕ ವಹಿಸಿದ್ದರು.


ಪಂಜ ಬಿ.ಎಂ.ಎಸ್ ಆಟೋ ಚಾಲಕ ಸಂಘದ ಪೂರ್ವಾಧ್ಯಕ್ಷ ದೇವಪ್ಪ ಏನೇಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಲಬ್ ನ ಕೋಶಾಧಿಕಾರಿ ದುರ್ಗಾಪ್ರಸಾದ್ ಅಂಬೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿತೇಶ್ ಪಂಜದಬೈಲು ಸ್ವಾಗತಿಸಿದರು, ಚಂದ್ರಶೇಖರ್ ದೇರಾಜೆ ವಂದಿಸಿದರು, ಉದಯ ಪಲ್ಲೋಡಿ ನಿರೂಪಿಸಿದರು.


ಫಲಿತಾಂಶ: ಪಂದ್ಯಾಟದಲ್ಲಿ ಪ್ರಥಮ ಸತೀಶ್ ಪಲ್ಲೋಡಿ ಮತ್ತು ನಿತಿನ್ ನಾಗತೀರ್ಥ, ದ್ವಿತೀಯ ರಕ್ಷಿತ್ ಪಲ್ಲೋಡಿ ಮತ್ತು ನಿರಂಜನ್ ತೋಟ ಸ್ಥಾನ ಪಡೆದುಕೊಂಡರು.