ಅನ್ಸಾರಿಯಾ ನೂತನ ಗ್ರಂಥಾಲಯಕ್ಕೆ ಪ್ರಭಾಕರ ಶಿಶಿಲ ರಿಂದ ಪುಸ್ತಕ ಕೊಡುಗೆ

0

ತಾಲೂಕಿನ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧೀನದ ದಅವಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.

ಇದಕ್ಕೆ ಬೇಕಾದ ಸುಮಾರು 50ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹಿರಿಯ ಲೇಖಕರು, ವಿಶ್ರಾಂತ ಪ್ರಾಂಶುಪಾಲರಾದ ಡಾ| ಪ್ರಭಾಕರ್ ಶಿಶಿಲ ತಾವು ಬರೆದ ಮತ್ತು ತಮ್ಮ ಗ್ರಂಥಾಲಯದಿಂದ ಉದಾರವಾಗಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಬೇಕು ವಿದ್ಯಾರ್ಥಿಗಳಿಗೆ ಪುಸ್ತಕ ಓದಲು ವಿದ್ಯಾ ಸಮುಚ್ಚಯಗಳಲ್ಲಿ ಸಮಯ ಮೀಸಲಿಡಬೇಕು ಹಾಗಾದರೆ ಮಾತ್ರ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಾಧ್ಯ ಎಂದವರು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶರೀಫ್ ಜಟ್ಟಿಪ್ಪಳ್ಳ, ವ್ಯವಸ್ಥಾಪಕರಾದ ಮುಹಮ್ಮದ್ ಉವೈಸ್ , ಅಧ್ಯಾಪಕರಾದ ನೌಶಾದ್ ಮದನಿ, ಸಯ್ಯಿದ್ ಹುಸೈನ್ ಪಾಶಾ ಸಅದಿ , ಹಾಫಿಝ್ ಹಾಮಿದ್ ಹಿಮಮಿ ಜತೆಗಿದ್ದರು