ಅ.4ರಂದು ಮೇನಾಲ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಪೂಜೆಯು ಅ.4ರಂದು ನಡೆಯಲಿದೆ.

ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ, ಅ.3ರಂದು ಬೆಳಗ್ಗೆ ಗಣಹೋಮ, ಮತ್ತು ನಾಗತಂಬಿಲ, ಗುಳಿಗ ತಂಬಿಲ ನಡೆಯುವುದು. ಅ.4ರಂದು ಮಧ್ಯಾಹ್ನ ಹೂವಿನ ಪೂಜೆ, ಮಹಾಪೂಜೆ ಮತ್ತು ಅನ್ನದಾನ, ರಾತ್ರಿ 7 ಕ್ಕೆ ಭಜನೆ, ರಾತ್ರಿ 9.30 ಕ್ಕೆ ಮಹಾಪೂಜೆ ಮತ್ತು ದೇವಿ ಸೇವೆ ಮತ್ತು ಅನ್ನದಾನ ನಡೆಯುವುದು.