ಆಲೆಟ್ಟಿ ಜೆ.ಎಫ್.ಸಿ ಟೈಗರ್ಸ್ ರವರ ಪಿಲಿರಂಗ್ -ಊದು ಪೂಜೆಯ ಆಮಂತ್ರಣ ಬಿಡುಗಡೆ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್, ಜೆ.ಎಫ್.ಸಿ.ಟೈಗರ್ಸ್ ಆಲೆಟ್ಟಿ ಇದರ ವತಿಯಿಂದ ಸುಳ್ಯ ದಸರಾ ಉತ್ಸವದ ಪ್ರಯುಕ್ತ 3 ನೇ ವರುಷದ ಸ್ಥಬ್ಧ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು ಇದರ ಊದು ಪೂಜೆಯ ಆಮಂತ್ರಣ ಪತ್ರ ಬಿಡುಗಡೆಯು ಸದಾಶಿವ ದೇವಳದಲ್ಲಿ ಅ.4 ರಂದು ನಡೆಯಿತು.

ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ಪ್ರಾರ್ಥನೆ ನೆರವೇರಿಸಿದರು. ವ್ಯ.ಸ.ಸದಸ್ಯರಾದ ಅಚ್ಚುತ ಮಣಿಯಾಣಿ ಆಲೆಟ್ಟಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜೆ.ಎಫ್.ಸಿ ಟೈಗರ್ಸ್ ಅಧ್ಯಕ್ಷ ಅಭಿಲಾಷ್ ಕೊಲ್ಲರಮೂಲೆ, ಜನನಿ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ, ಹಿರಿಯರಾದ ನಾರಾಯಣ ರೈ ಆಲೆಟ್ಟಿ ,ಉದಯ ಕುಡೆಕಲ್ಲು, ರಾಮಚಂದ್ರ ಆಲೆಟ್ಟಿ,ನವೀನ್ ಕುಮಾರ್ ಆಲೆಟ್ಟಿ ಹಾಗೂ ಪದಾಧಿಕಾರಿಗಳಾದ ಲತೀಶ್ ಗುಂಡ್ಯ, ರೋಹಿತ್ ಯಾದವ್ ಕುಡೆಕಲ್ಲು, ನಿತಿನ್ ಗುಂಡ್ಯ, ಸುನಿಲ್ ಗುಂಡ್ಯ, ನಾಗರಾಜ್ ಬಡ್ಡಡ್ಕ, ಹರಿಪ್ರಸಾದ್ ಗುಂಡ್ಯ, ವಿಷ್ಣು ಪ್ರಸಾದ್ ಗುಂಡ್ಯ, ವಿನೋದ್ ಕೊಯಿಂಗಾಜೆ, ಚಿತ್ರವೇಲು ನಾಗಪಟ್ಟಣ, ಧನುಷ್ ಆಲೆಟ್ಟಿ, ಗಗನ್ ಕುಡೆಕಲ್ಲು, ನಿತೇಶ್ ಗುಂಡ್ಯ,ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.