ಹಾಜಿ ಇಬ್ರಾಹಿಂ ಸೀಪುಡ್ ರವರಿಗೆ ಗೌರವರ್ಪಣೆ
ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಗೆ ಹೆಚ್ಚುವರಿಯಾಗಿ ಅಳವಡಿಸಿದ ನೂತನ ಸಿ ಸಿ ಕ್ಯಾಮರಾದ
ಉದ್ಘಾಟನೆಯನ್ನು ಸುಳ್ಯ ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಿರಿಯ ಉದ್ಯಮಿ ಹಾಜಿ ಇಬ್ರಾಹಿಂ ಸಿ ಪುಡ್ ರವರು ನೆರವೇರಿಸಿದರು
ಶುಕ್ರವಾರ ಜುಮ್ಮಾ ನಮಾಝ್ ಬಳಿಕ ನಡೆದ ಸರಳ ಸಮಾರಂಭದಲ್ಲಿ ಇಬ್ರಾಹಿಂ ಹಾಜಿಯವರು ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು.
ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಬ್ರಾಹಿಂ ಹಾಜಿಯವರ ಕೊಡುಗೆಯನ್ನು ಮತ್ತು ಅವರ ಸಮಾಜದ ಬಗ್ಗೆಗಿನ ಕಾಳಜಿಯನ್ನು ಶ್ಲಾಘಿಸಿದರು
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಅಬೂಬಕ್ಕರ್ ಸದ್ದೀಖ್ ಸಖಾಪಿ ಅಲ್ ಹರ್ಷದಿ,
ಸುದ್ದಿ ಪತ್ರಿಕೆಯ ವರದಿಗಾರರಾದ ಶರೀಪ್ ಜೆಟ್ಟಿಪಳ್ಳ ,ಜಮಾಅತ್ ಸಲಹಾ ಸಮಿತಿ ಸದಸ್ಯರಾದ ಹಾಜಿ ಪಿ ಎ ಉಮ್ಮರ್ ಗೂನಡ್ಕ, ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಹಾಜಿ ಇಬ್ರಾಹಿಂ ರವನ್ನು ಶಾಲು ಹೊದಿಸಿ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.