ಐವರ್ನಾಡು : ಶ್ರೀ ಶಾರದಾ ಪೂಜಾ ಮಹೋತ್ಸವ – ಭಜನಾ ಕಾರ್ಯಕ್ರಮ

0

ಯುವಶಕ್ತಿ ಸಂಘ ಐವರ್ನಾಡು ಇದರ ಸಹಯೋಗದಲ್ಲಿ ನಡೆಯುವ ಶ್ರೀ ಶಾರದ ಪೂಜಾ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಇಂದು ಬೆಳಿಗ್ಗೆ ಶ್ರೀ ಗುರುದೇವ ಭಜನಾ ಮಂಡಳಿ ಐವರ್ನಾಡು ಇದರ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.


ನಂತರ ಮಕ್ಕಳಿಗೆ ಅಕ್ಷರಭ್ಯಾಸ ಆಯುಧ ಪೂಜಾ ಕಾರ್ಯಕ್ರಮ ನೆರವೇರಿತು.


ಮಧ್ಯಾಹ್ನ ಶ್ರೀ ಶಾರದಾ ದೇವಿಗೆ ಮಹಾಪೂಜೆ ನಡೆದ ಬಳಿಕ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಗ್ರಾಮದ ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಇಂದು ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾ ಯಾತ್ರೆ, ಐವನಾಡಿನ ಪ್ರಮುಖ ರಾಜ ರಸ್ತೆಯಲ್ಲಿ ಸಾಗಿ ಬಾಂಜಿ ಕೋಡಿ ಹೊಳೆಯಲ್ಲಿ ಜಸ್ತಂಭನ ಗೊಳ್ಳಲಿದೆ.