ಪಾಂಡಿಗದ್ದೆ ಶಾಲೆಯಲ್ಲಿ ಗಾಂಧಿಜೀ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜನ್ಮದಿನ ಪ್ರಯುಕ್ತ ಸೋಲಾರ್ ,ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ,ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ

0

ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ವಿಂಗ್ ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ , ಸರಕಾರಿ ಕಿರಿಯ ಪ್ರಾಥಮಿಕ ಪಾಂಡಿಗದ್ದೆ ಇದರ ಆಶ್ರಯದಲ್ಲಿ ಗಾಂಧೀಜಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ರವರ ಜನ್ಮದಿನದ ಪ್ರಯುಕ್ತ ಸೋಲಾರ್, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ,ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ , ಆಟೋಟ ಸ್ಪರ್ಧೆಗಳು ಪಾಂಡಿಗದ್ದೆ ಸ ಕಿ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮಂಗಳೂರು ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಯೋಜನಾಧಿಕಾರಿ, ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ ಕೆ ಉದ್ಘಾಟಿಸಿ ಶುಭ ಹಾರೈಸಿದರು.

ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷ , ಕೆ ವಿ ಜಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ ಯು ಬಿ, ಸ್ತ್ರೀ ರೋಗ ತಜ್ಞೆ ಡಾ.ವೀಣಾ ಪಾಲಚಂದ್ರ, ಉಪನ್ಯಾಸಕಿ ಡಾlಅನುರಾಧ ಕುರುಂಜಿ, ಎಸ್ ಡಿ ಎಂ ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪ ಕಾರ್ಯ ನಿರ್ವಹಣಾಧಿಕಾರಿ ಜಯರಾಮ ಕಂಬಳ, ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ, ಸಿ ಆರ್‌ ಪಿ ಜಯಂತ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭದಲ್ಲಿ ಸೇವಾ ಸಂಗಮ ಗೌರವ ಸಲಹೆಗಾರ ಎನ್ ಆರ್ ಗಣೇಶ್ ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಸೇವಾ ಸಂಗಮ ಗೌರವ ಸಲಹೆಗಾರರಾದ ಜಯಪ್ರಕಾಶ್ ಕೆ, ರಾಮಚಂದ್ರಗೌಡ ಪಲ್ಲತ್ತಡ್ಕ, ಪಾಲಚಂದ್ರ ವೈ ವಿ,ನಿವೃತ್ತ ಉಪನ್ಯಾಸಕ ಸತ್ಯನಾರಾಯಣ ಪ್ರಸಾದ್, ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ಪಾಂಡಿಗೆದ್ದೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕುಮಾರ್ ಚಳ್ಳಕೋಡಿ,, ಕೆ ವಿ ಜಿ ಪಿ ಅಧೀಕ್ಷಕ ಶಿವರಾಮ ಕೆ, ಪಾಂಡಿಗದ್ದೆ ಶಾಲೆಯ ಮುಖ್ಯ ಶಿಕ್ಷಕ ಯಶೋಧರ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಉಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊಡುಗೆಗಳು: ಶಾಲೆಗೆ ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ ವತಿಯಿಂದ ಸೋಲರ್ ಇನ್ವಟರ್ ಮತ್ತು ಕಾರ್ತಿಕ್ ಕಂಬಳ ರವರು ಸ್ಮಾರ್ಟ್ ಟಿವಿ ಕೊಡುಗೆಯಾಗಿ ನೀಡಿದರು.

ಸೇವಾ ಸಂಗಮ ಟ್ರಸ್ಟ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ, ಪೋಷಕರಿಗೆ ,ಊರಿನ ವಿದ್ಯಾ ಅಭಿಮಾನಿಗಳಿಗೆ , ಶಿಕ್ಷಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಉಚಿತ ದಂತ ವೈದ್ಯಕೀಯ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಇದೇ ಜಯರಾಮ ಕಂಬಳ ಮತ್ತು ಬಾಲಕೃಷ್ಣ ಗೌಡ ಬೊಳ್ಳೂರು ರವನ್ನು ಪಾಂಡಿಗದ್ದೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು