ಎಲಿಮಲೆ ‌ಪ್ರೌಢಶಾಲೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ಘಟಕದ ಉದ್ಘಾಟನೆ

0

ಸರಕಾರಿ ಪ್ರೌಢಶಾಲೆಯಲ್ಲಿ ಎಲಿಮಲೆ ಇಲ್ಲಿ ಸ್ಕೌಟ್ ಮತ್ತು ಗೈಡ್ಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ತರಬೇತಿ ಕಾರ್ಯಕ್ರಮವನ್ನು ಆ.7ರಂದು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಮತ್ತು ತರಬೇತುದಾರರಾಗಿ ರಾಜ್ಯ ಪುರಸ್ಕಾರ ರೋವರ್ ಮತ್ತು ಸಾಂತೋಮ್ ವಿದ್ಯಾನಿಕೇತನ ರೆಂಜಿಲಾಡಿ ಇಲ್ಲಿನ ಸ್ಕೌಟ್ ಮಾಸ್ಟರ್ ಆಗಿರುವ ವಿಶ್ವತ್ ಪಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.

ಶಾಲಾ ಮುಖ್ಯ ಗುರುಗಳಾದ ಸಂಧ್ಯಾ ಕೆ, ಸ್ಕೌಟ್ ಮಾಸ್ಟರ್ ಆಗಿರುವ ಭರತ್ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಶಿಕ್ಷಕರಾದ ಮುರಳೀಧರ ಪಿ ಜೆ ಮತ್ತು ದೈಹಿಕ ಶಿಕ್ಷಕರಾದ ತಿರುಮಲೇಶ್ವರಿ ಹಾಗೂ ಕಂಪ್ಯೂಟರ್ ಶಿಕ್ಷಕಿಯಾದ ದಿವ್ಯ ಮತ್ತು ಘಟಕದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ತರಬೇತುದಾರರಾದ ವಿಶ್ವತ್ ಇವರು ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಸ್ಕೌಟಿಂಗ್ ನ ಇತಿಹಾಸ ಮತ್ತು ತರಬೇತಿಯನ್ನು ನೀಡಿದರು.