ಸುಳ್ಯದ ಮುಖ್ಯರಸ್ತೆಯ ಬಾಳೆಮಕ್ಕಿ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಕಾಂಞಂಗಾಡ್ ರಬ್ಬರ್ಸ್ ನಲ್ಲಿ ರಬ್ಬರ್ ಖರೀದಿ ಅ. 8ರಂದು ಆರಂಭಗೊಂಡಿತು.
ರಬ್ಬರ್ ಬೆಳೆಗಾರರ ರಬ್ಬರ್ ಶೀಟ್‌ಗಳಿಗೆ ಉತ್ತಮ ಬೆಲೆ ಒದಗಿಸಲು ರಬ್ಬರ್ ಬೋರ್ಡ್ ಅಧೀನದಲ್ಲಿರುವ ಕಂಪನಿಯಾದ ಕಾಂಞಂಗಾಡ್ ರಬ್ಬರ್ಸ್ ಲಿಮಿಟೆಡ್ ಸುಳ್ಯ ಶಾಖೆ ನಿರ್ಧರಿಸಿ ರಬ್ಬರ್ ಖರೀದಿ ಆರಂಭಿಸಿದೆ. ಉದ್ಘಾಟನೆಯನ್ನು ರಬ್ಬರ್ ಬೋರ್ಡ್ ಪ್ರಾದೇಶಿಕ ಕಛೇರಿ ಪುತ್ತೂರಿನ ಅಭಿವೃದ್ಧಿ ಅಧಿಕಾರಿ ಅಜಿತ್ ಪ್ರಸಾದ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಂಞಂಗಾಡ್ ರಬ್ಬರ್ಸ್ ನ ಎಂ.ಡಿ.ಥಾಮಸ್ ಜಕಾರಿಯಾಸ್, ಕಾಂಪ್ಲೆಕ್ಸ್ ನ ಮಾಲಕರಾದ ಕೃಷ್ಣರಾವ್ ,ಚೊಕ್ಕಾಡಿ ಆರ್.ಪಿ.ಸಿ.ನ ಶಿವರಾಮ ಬೊಳ್ಳೂರು, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ ಭಾಗವಹಿಸಿದರು.ಕೃಷಿಕರಾದ ಬಾಲಮುರಳಿ ಕುದ್ಪಾಜೆ, ಸುಬ್ರಹ್ಮಣ್ಯ ಕುದ್ಪಾಜೆ,ಕಿರಣ್ ನೀರ್ಪಾಡಿ, ಹರೀಶ್ ಅಡ್ತಲೆ,ಕೆ.ಎಲ್.ಸತೀಶ್ ಕಾನತ್ತಿಲ, ವಿಜಯ ಪಡ್ಡಂಬೈಲು, ಜೈಸನ್ ಪೆರಲ್, ವಿಶ್ವನಾಥ ಮೂಡೂರು, ನಿರಂಜನ್ ಪೈಚಾರ್, ಜಯಪ್ರಕಾಶ್ ರೈ ದೇರ್ಲ, ಕಿರಣ್ ಮುಡೂರು, ಧನಂಜಯ ಮಡ್ತಿಲ, ಸಂದೇಶ್ ಕುಕ್ಕುಜಡ್ಕ, ಶ್ರೇಯಸ್ ಸುಳ್ಳಿ, ಸೋಮಪ್ಪ ಗೌಡ ಕೊರತ್ಯಡ್ಕ,ಕಾಂಞಂಗಾಡ್ ರಬ್ಬರ್ಸ್ ನ ಪುತ್ತೂರು ಬ್ರಾಂಚ್ ಮನೇಜರ್ ಶ್ಯಾಮ್ ಪ್ರಸಾದ್ ಮುಡೂರು ಉಪಸ್ಥಿತರಿದ್ದರು.
ಸುಳ್ಯ ಬ್ರಾಂಚ್ ಮನೇಜರ್ ದಯಾನಂದ ಕಂದಡ್ಕ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.