ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣ ಅಭಿವೃದ್ಧಿ ಯೋಜನೆ, ಶ್ರೀ ಮಂಜುನಾಥೇಶ್ವರ ಬಜನಾ ಪರಿಷತ್ ಸುಳ್ಯ, ಮಂಜುನಾಥೇಶ್ವರ ಭಜನಾ ಪರಿಷತ್ ನಿಂತಿಕಲ್ಲು ವಲಯ, ಪ್ರಗತಿ ಬಂದು ಸ್ವ-ಸಹಾಯ ಒಕ್ಕೂಟ ನಿಂತಿಕಲ್ಲು, ಇದರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ಶಿಬಿರವು ಒ.೩ ರಂದು ದೇವಾಲಯದ ವಠಾರದಲ್ಲಿ ನಡೆಯಿತು. ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಏಳು ದಿನ ತರಬೇತಿ ನಡೆದು ಒ.೯ ರಂದು ಸಮಾರೋಪ ಕಾರ್ಯಕ್ರಮ ಪ್ರಯುಕ್ತ ಅಲೆಕ್ಕಾಡಿ ಕೋಟಿ ಚೆನ್ನಯ ಮಹಾದ್ವಾರದ ಬಳಿ ಚಾಲನೆಯನ್ನು ಅಧ್ಯಕ್ಷರು ಮಾಡಿದರು. ಬಳಿಕ ದೇವಸ್ಥಾನದವರೆಗೆ ಕುಣಿದ ಭಜನೆ ಸಾಗಿ ಸಮಾರೋಪ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ದೀಪ ಪ್ರಜ್ಜಲನೆ ಮಾಡಿದ ಬಳಿಕ ಆನಂದ ಗೌಡ ಆರೆಂಬಿ ಶಿಬಿರದ ದೀಪ ಪ್ರಜ್ವಲನೆ ಮಾಡಿದರು ನಿಂತಿಕಲ್ಲು ವಲಯಾಧ್ಯಕ್ಷ ಪದ್ಮನಾಭ ಪೂದೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮೂರು ಪ್ರೌಢಶಾಲಾ ಆಂಗ್ಲ ಮಾಧ್ಯಮ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮುಖ್ಯ ಅತಿಥಿಗಳಾದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ನಿಂತಿಕಲ್ಲು ಜನ ಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ಗೌಡ ಕಲ್ಲೆಂಬಿ, ವ್ಯವಸ್ಥಾಪನ ಸಮಿತಿ ಸದಸ್ಯ ವೆಂಕಪ್ಪ ಗೌಡ ಆಲಾಜೆ , ಸುಳ್ಯ ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್, ಟಿ.ಎನ್ ಸುಳ್ಯ ಜನಜಾಗೃತಿ ವೇದಿಕೆ ಸದಸ್ಯರಾದ ವಸಂತ ಹುದೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಂತಿಕಲ್ಲು ಭಜನಾ ಪರಿಷತ್ ಕಾರ್ಯದರ್ಶಿ ವಿಶಾಲಾಕ್ಷಿ ಸ್ವಾಗತಿಸಿದರು, ನಿಂತಿಕಲ್ಲು ವಲಯ ಮೇಲ್ವಿಚಾರಕರಾದ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ನಿಂತಿಕಲ್ಲು ವಲಯದ ಎಲ್ಲಾ ಪದಾಧಿಕಾರಿಗಳು, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.