ನ.23ರಂದು ಕೇರ್ಪಳದಲ್ಲಿ ಸಾಂಸ್ಕೃತಿಕ ವೈಭವ

0

ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ಸ.ಹಿ.ಪ್ರಾ.ಶಾಲೆ ಕೇರ್ಪಳ ಇದರ ಹಿರಿಯ ವಿದ್ಯಾರ್ಥಿ ವೃಂದ, ಹಾಗೂ ಊರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.

ನ.23ರಂದು ಸಂಜೆ ಉದ್ಘಾಟನೆ ಬಳಿಕ ಕೇರ್ಪಳ, ಕುರುಂಜಿಭಾಗ್, ಕುರುಂಜಿಗುಡ್ಡೆ, ಭಸ್ಮಡ್ಕ, ಬೂಡು ಊರಿನ ನೃತ್ಯ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯುವುದು. ರಾತ್ರಿ 7 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತ – ಸಾಹಿತ್ಯ – ಸಂಭ್ರಮ ನಡೆಯುವುದು. ಬಳಿಕ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.