ಆಲೆಟ್ಟಿ ಗ್ರಾಮದ ನಾರ್ಕೋಡು ಬಾಲಕೃಷ್ಣ (ಹುಕ್ರಪ್ಪ)ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪೂರ್ಣಿಮಾ, ಪುತ್ರರಾದ ಕೌಶಿಕ್,ಮನ್ವಿತ್, ಸಹೋದರರಾದ ವಾಸುದೇವ ನಾರ್ಕೋಡು, ಚಿದಾನಂದ ನಾರ್ಕೋಡು, ಸಹೋದರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಕುಮುದಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಕಳೆದ ಸುಮಾರು 30 ವರ್ಷಗಳ ಕಾಲ ಅಟೋ ಚಾಲಕರಾಗಿದ್ದು ಚಿರಪರಿಚಿತರಾಗಿದ್ದರು. ಪ್ರಸ್ತುತ ನಾರ್ಕೋಡು ಜಂಕ್ಷನ್ ನಲ್ಲಿ ಕ್ಯಾಂಟಿನ್ ನಡೆಸಿಕೊಂಡಿದ್ದರು.