ಪಂಜ ನಾಡಹಬ್ಬ -ಶ್ರೀ ಶಾರದೋತ್ಸವ⬆️ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2024 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ 15 ನೇ ವರ್ಷದ ಶ್ರೀ ಶಾರದೋತ್ಸವ -2024 ಪ್ರಯುಕ್ತ ಅ.12.ರಂದು ಮುಂಜಾನೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು
ಸಾಂಸ್ಕೃತಿಕ ಸ್ಪರ್ಧೆಯನ್ನು ಕೇನ್ಯ ಶಾರದಾ ಗಾರ್ಡನ್ ಶ್ರೀಮತಿ ಮಮತಾ ಎಸ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.
ಕ್ರೀಡಾ ಸ್ಪರ್ಧೆಯನ್ನು ಬ್ಯಾಂಕ್ ಆಫ್ ಬರೋಡ , ರಾಷ್ಟ್ರೀಯ ಕಬ್ಬಡಿ ಆಟಗಾರ ದೀವೀಶ್ ಬೊಳ್ಳಾಜೆ ಉದ್ಘಾಟಿಸಿ ಶುಭಹಾರೈಸಿದರು.

ಶಾರದೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ ಸಭಾಧ್ಯಕ್ಷತೆ ವಹಿಸಿದ್ದರು.

ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಶಾರದೋತ್ಸವ ಸಮಿತಿ ಉಪಾಧ್ಯಕ್ಷ ದಾಮೋದರ ಪಲ್ಲೋಡಿ, ಕಾರ್ಯದರ್ಶಿ ಗೋಪಾಲಕೃಷ್ಣ ಬಳ್ಳಕ, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಸತೀಶ್ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಗತೀರ್ಥ ಪ್ರಾರ್ಥಿಸಿದರು.ಲೋಕೇಶ್ ಬರೆಮೇಲು ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು. ಗೋಪಾಲಕೃಷ್ಣ ಬಳ್ಳಕ ವಂದಿಸಿದರು.
ಬಳಿಕ ದಿವೀಶ್ ಬೊಳ್ಳಾಜೆ ಯವರು ಕ್ರೀಡಾಂಗಣವನ್ನು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಕ್ರೀಡಾ ಸ್ಪರ್ಧೆಗಳ ಸಂಚಾಲಕ ಯೋಗೀಶ್ ಚಿದ್ಗಲ್ಲು ಮೊದಲಾದವರು ಉಪಸ್ಥಿತರಿದ್ದರು.ದಾಮೋದರ ನೇರಳ ನಿರೂಪಿಸಿದರು.

ಪೂರ್ವಾಹ್ನ ಪ್ರತಿಷ್ಠೆ , ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ ಜರುಗಿತು. ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ. ಬಳಿಕೆ ಸಾಂಸ್ಕೃತಿಕ ಸಂಭ್ರಮದಲ್ಲಿ ಕಲಾಮಂದಿರ ಡ್ಯಾನ್ಸ್ ಕ್ರೀವ್ ಪಂಜ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಜರುಗಲಿದೆ.

ಇಂದು ಸಂಜೆ ವೈಭವದ ಶೋಭಾಯಾತ್ರೆ; ಇಂದು (ಅ.12)ಸಂಜೆ 4 ರಿಂದ ವೈಭವದ ಶೋಭಾಯಾತ್ರೆ ಜಲಸ್ತಂಭನ ನಡೆಯಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ, ವರ್ಣರಂಜಿತ ನಾಸಿಕ್ ಬ್ಯಾಂಡ್, ಹುಲಿ ವೇಷ,ಕೋಲಾಟ ಜರುಗಲಿದೆ.