ಪಂಜ ನಾಡಹಬ್ಬ -ಶ್ರೀ ಶಾರದೋತ್ಸವ⬆️ ಧಾರ್ಮಿಕ ಸಭಾ ಕಾರ್ಯಕ್ರಮ

0

⬆️ ನಿತ್ಯ ಭಗವಂತನ ಆರಾಧನೆ ನಾಮ ಸ್ಮರಣೆಯಿಂದ ನಮ್ಮ ಜೀವನ ಪಾವನ-ಬಿ ರಂಗಯ್ಯ ಬಳ್ಳಾಲ್
⬆️ ಯೋಗೀಶ್ ಚಿದ್ಗಲ್ಲು ಮತ್ತು ದಿವೀಶ್ ಬೊಳ್ಳಾಜೆ ರವರಿಗೆ ಸನ್ಮಾನ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2024 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ 15 ನೇ ವರ್ಷದ ಶ್ರೀ ಶಾರದೋತ್ಸವ -2024 ಪ್ರಯುಕ್ತ ಅ.12.ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಮೇಲ್ಮನೆ ಸಭಾಧ್ಯಕ್ಷತೆ ವಹಿಸಿದ್ದರು.
ತುಳು ರಂಗಭೂಮಿ ಕಲಾವಿದ ಮತ್ತು ವಾಗ್ಮಿ ಬಿ ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು ಧಾರ್ಮಿಕ ಉಪನ್ಯಾಸ ನೀಡಿ “ದೇವಳಗಳು , ಧಾರ್ಮಿಕ ಕೇಂದ್ರಗಳು ನಮಗೆ ಧಾರ್ಮಿಕ ಶಿಕ್ಷಣ ನೀಡುತ್ತದೆ. ಮಕ್ಕಳು ಧಾರ್ಮಿಕತೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡ ಬೇಕು. ಆ ಮೂಲಕ ಅವರಲ್ಲಿ ಧಾರ್ಮಿಕತೆ ಮೈಗೂಡಲು ಸಾಧ್ಯವಿದೆ.ನಿತ್ಯ ಭಗವಂತನ ಆರಾಧನೆ ನಾಮ ಸ್ಮರಣೆಯಿಂದ ನಮ್ಮ ಜೀವನ ಪಾವನವಾಗುತ್ತದೆ” ಎಂದು ಅವರು ಹೇಳಿದರು.

ಶಾರದೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಮೇಲ್ಮನೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ನ್ಯಾಯವಾದಿ ಜಗದೀಶ್ ಹುದೇರಿ ,
ಇದೇ ವೇಳೆ ಪಂಜ ಪದವಿ ಪೂರ್ವ ಕಾಲೇಜು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು , ಬ್ಯಾಂಕ್ ಆಫ್ ಬರೋಡ ಉದ್ಯೋಗಿ ,ರಾಷ್ಟ್ರೀಯ ಕಬ್ಬಡಿ ಆಟಗಾರ ದಿವೀಶ್ ಬೊಳ್ಳಾಜೆ ರವರನ್ನು ಸನ್ಮಾನಿಸಲಾಯಿತು.


ಭಜನಾ ಮಂಡಳಿಯ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ, ನಿಕಟಪೂರ್ವಾದ್ಯಕ್ಫ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರು ಪ್ರಸಾದ್ ತೋಟ,ಶಾರದೋತ್ಸವ ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ ಬಳ್ಳಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಭಜನಾ ಮಂಡಳಿಯ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ರವರು ಭಜನಾ ಮಂದಿರಕ್ಕೆ ಧ್ವನಿ ವರ್ಧಕವನ್ನು ಕೊಡುಗೆಯಾಗಿ ನೀಡಿದರು.

ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರುಗಿತು.

ಕಾರ್ಯಕ್ರಮದಲ್ಲಿ ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು. ಗುರು ಪ್ರಸಾದ್ ತೋಟ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.ದಾಮೋದರ ಪಲ್ಲೋಡಿ ವಂದಿಸಿದರು.

ಪೂರ್ವಾಹ್ನ ಪ್ರತಿಷ್ಠೆ , ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ ಜರುಗಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಿತು. ಬಳಿಕೆ ಸಾಂಸ್ಕೃತಿಕ ಸಂಭ್ರಮದಲ್ಲಿ ಕಲಾಮಂದಿರ ಡ್ಯಾನ್ಸ್ ಕ್ರೀವ್ ಪಂಜ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಜರುಗಲಿದೆ.

ಇಂದು ಸಂಜೆ ವೈಭವದ ಶೋಭಾಯಾತ್ರೆ; ಇಂದು (ಅ.12)ಸಂಜೆ 4 ರಿಂದ ವೈಭವದ ಶೋಭಾಯಾತ್ರೆ ಜಲಸ್ತಂಭನ ನಡೆಯಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ, ವರ್ಣರಂಜಿತ ನಾಸಿಕ್ ಬ್ಯಾಂಡ್, ಹುಲಿ ವೇಷ,ಕೋಲಾಟ ಜರುಗಲಿದೆ. .