ಸುಳ್ಯದ ಶ್ರೀ ಶಾರದಾಂಬ ದಸರಾ ಉತ್ಸವ -2024

0

ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

ಮಹಿಳಾ ದಸರಾ ಪ್ರಯುಕ್ತ ಮಹಿಳೆಯರಿಂದಲೇ ಸಾಂಸ್ಕೃತಿಕ ಕಲರವ

ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024ರ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಅ.12ರಂದು ಮಹಿಳಾ ದಸರಾ ಅಂಗವಾಗಿ ಆದಿ ಕಲ್ಚರಲ್ ಅಕಾಡೆಮಿ ಮೂಡಬಿದಿರೆಯ ವಿದುಷಿ ಸುಮನ ಪ್ರಸಾದ್ ಮತ್ತು ನೃತ್ಯಗುರು ಅಂಕಿತಾ ಪ್ರಜ್ವಲ್ ಎನ್.ಆರ್.ಪುರ ಅವರಿಂದ ಭರತನಾಟ್ಯ ನೃತ್ಯ ವೈಭವ ಹಾಗೂ ಮಂಗಳೂರಿನ ಬಾಳ – ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದಿಂದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರ ನಿರ್ದೇಶನದ ಮಹಿಳಾ ಯಕ್ಷಗಾನ ‘ಶ್ರೀದೇವಿ ಮಹಿಷಮರ್ದಿನಿ’ ಪ್ರದರ್ಶನಗೊಳ್ಳುತ್ತಿದೆ‌.

ರಾತ್ರಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.