ರೋಮಾಂಚಕಾರಿ ನಡೆದ ಕೆಸರು ಗದ್ದೆ ಕ್ರೀಡಾಕೂಟ
ಸೂರ್ಯ ಹೊನಲು ಬೆಳಕಿನಲ್ಲಿ ನಡೆದ ಹಗ್ಗ ಜಗ್ಗಾಟ
ಅ.19 ರ ತನಕ ನಿರಂತರ ಕಾರ್ಯಕ್ರಮ
ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ -2024 ಅ.13 ರಿಂದ ಅ.19 ತನಕ ನಡೆಯಲಿದೆ. ವಿಜೃಂಭಣೆಯಿಂದ ನಡೆಯಲಿದೆ.
ಅ.13 ರಂದು ಮುಂಜಾನೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ಜೇಸಿ ಸಪ್ತಾಹ ಉದ್ಘಾಟನೆ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಜರುಗಿತು.ಸಂಜೆ ಕೆಸರು ಗದ್ದೆ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಏನೆಕಲ್ಲು ಬಹುಮಾನ ವಿತರಣೆ ಮಾಡಿದರು.
ಕ್ರೀಡಾ ಕೂಟದಲ್ಲಿ ಅತ್ಯಂತ ಹೆಚ್ಚು ತಂಡಗಳು ಪಾಲ್ಗೊಂಡು ರೋಮಾಂಚಕಾರಿ ಪಂದ್ಯಾಟ ನಡೆಯಿತು.
ಪುರುಷರ ವಿಭಾಗದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಒಟ್ಟು 28 ತಂಡಗಳು ಪಾಲ್ಗೊಂಡಿದ್ದು ಜಿಲ್ಲೆಯ ಬಲಿಷ್ಠ ತಂಡಗಳಿಂದ ರೋಮಾಂಚಕಾರಿ ಪಂದ್ಯಾಟ ನಡೆಯಿತು. ಪುರುಷರ ಹಗ್ಗ ಜಗ್ಗಾಟ ಪಂದ್ಯಾಟ ಸೂರ್ಯ ಹೊನಲು ಬೆಳಕಿನಲ್ಲಿ ನಡೆಯಿತು. ಏರ್ ಗನ್ ಶೂಟಿಂಗ್ ನಲ್ಲಿ 65 ಸ್ಪರ್ಧಿಗಳು ಭಾಗವಹಿಸಿದ್ದರು.
ಫಲಿತಾಂಶ:
ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಷ್ಣು ಬಳಗ ಅಡ್ಕ ಪುತ್ತೂರು (ಪ್ರಥಮ), ವಿದ್ಯಾದಾಹಿನಿ ವಿದ್ಯಾನಗರ (ದ್ವಿತೀಯ), ರಜನ್ ಫ್ರೆಂಡ್ಸ್ ಆಲಂತಾಯ(ತೃತೀಯ), ಶಿವಾಜಿ ಫ್ರೆಂಡ್ಸ್ ದುಗಲಡ್ಕ (ಚತುರ್ಥ) ಸ್ಥಾನ ಪಡೆದಿದ್ದಾರೆ.
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಹಂಟರ್ ಏನೆಕಲ್ಲು (ಪ್ರಥಮ), ಕೆ ಎಸ್ ಜಿ ನಿಂತಿಕಲ್ಲು (ದ್ವಿತೀಯ), ಆದರ್ಶ ಯೂತ್ ಕ್ಲಬ್ ಗುತ್ತಿಗಾರು ಹಾಲೆಮಜಲು (ತೃತೀಯ), ಶಿವ ಫ್ರೆಂಡ್ಸ್ ಪಂಜ (ಚತುರ್ಥ)
ಸ್ಥಾನ ಪಡೆದಿದ್ದಾರೆ.
ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ನಾಗಶ್ರೀ ಫ್ರೆಂಡ್ಸ್ ಸುಳ್ಯ (ಪ್ರಥಮ), ಏನೆಕಲ್ಲು ತಂಡ (ದ್ವಿತೀಯ) ಸ್ಥಾನ ಪಡೆದಿದ್ದಾರೆ. ಬಾಲಕರ ಹಾಳೆ ಎಳೆಯುವ ಇಶಾನ್ ಪಾಟಾಜೆ, ಯಶ್ವಿನ್ (ಪ್ರಥಮ), ಗೌರವ್, ಅಗಸ್ತ್ಯ(ದ್ವಿತೀಯ)ಸ್ಥಾನ ಪಡೆದಿದ್ದಾರೆ. ಹಿಮ್ಮುಕ ಓಟ ಲತೀಶ್ (ಪ್ರಥಮ), ಇಶಾನ್ ಪಾಟಾಜೆ (ದ್ವಿತೀಯ)ಸ್ಥಾನ ಪಡೆದಿದ್ದಾರೆ. ಬಾಲಕಿಯರ ಹಾಳೆ ಎಳೆಯುವ ಸ್ಪರ್ಧೆಯಲ್ಲಿ ಆಧ್ಯ,ಕೆ ಲಿಖಿತಾ (ಪ್ರಥಮ), ಯಶ್ವಿತಾ,ಆನ್ಯ(ದ್ವಿತೀಯ)ಸ್ಥಾನ ಪಡೆದಿದ್ದಾರೆ. ಬಾಲಕಿಯರ ಹಿಮ್ಮುಕ ಓಟ ಸ್ಪರ್ಧೆಯಲ್ಲಿ ಕೆ ಲಿಖಿತಾ (ಪ್ರಥಮ), ಚಿನ್ಮಯಿ (ದ್ವಿತೀಯ)ಸ್ಥಾನ ಪಡೆದಿದ್ದಾರೆ.
ಏರ್ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಸೋಮಶೇಖರ ನೇರಳ (ಪ್ರಥಮ), ಸವಿತಾರ ಮುಡೂರು (ದ್ವಿತೀಯ), ಬಾಲಪ್ಪ ಐಪಳ (ತೃತೀಯ) ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ನಾಗಶ್ರೀ ಫ್ರೆಂಡ್ಸ್ ಸುಳ್ಯ (ಪ್ರಥಮ), ನಾಗಬ್ರಹ್ಮ ಕೊಡಿಯಾಲಬೈಲು (ದ್ವಿತೀಯ), ಉಳ್ಳಾಕುಲು ಚಿಂಗಾಣಿಗುಡ್ಡೆ (ತೃತೀಯ), ತೃಶೂಲಿನಿ ಬಳ್ಪ (ಚತುರ್ಥ) ಸ್ಥಾನ ಪಡೆದಿದ್ದಾರೆ. ವಿಜೇತರು ನಗದು ಮತ್ತು ಜೇಸಿಐ ಟ್ರೋಫಿ ಸ್ವೀಕರಿಸಿದರು.
ಸುರೇಶ್ ಪಡಿಪಂಡ ವೀಕ್ಷಕ ವಿವರಣೆ ನೀಡಿದರು. ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವಿಜೇತರ ಪಟ್ಟಿ ಯಾಚಿಸಿದರು. ಘಟಕದ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.