ಕೊಲ್ಲಮೊಗ್ರು: ಅಡಿಕೆ ವ್ಯಾಪಾರಿ ಅಬೂಬಕ್ಕರ್ ನಿಧನ

0

ಕೊಲ್ಲಮೊಗ್ರು ಕಲ್ಮಕಾರಿನಲ್ಲಿ ಕಳೆದ 40 ವರ್ಷಗಳಿಂದ ಮನೆ ಮನೆ ತೆರಳಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ಅಬೂಬಕ್ಕರ್ ಅವರು ಇಂದು ಬೆಳಿಗ್ಗೆ ಕಾಸರಗೋಡಿನ ಅಡೂರು ಕೊಟ್ಯಾಡಿ ಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಅಡೂರು ಕೊಟ್ಯಾಡಿ ನಿವಾಸಿಯಾಗಿರುವ ಇವರು ಕೊಲ್ಲಮೊಗ್ರದ ತನ್ನ ಸಹೋದರ ಅಬ್ದುಲ್ಲಾ ಮನೆಯಲ್ಲಿ ಹೆಚ್ಚಾಗಿ ವಾಸವಿದ್ದು ವ್ಯಾಪಾರ ವೃತ್ತಿ ಮಾಡುತಿದ್ದರು.
ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳು, ಕುಟುಂಬಸ್ಥರು ಮತ್ತು ಮಕ್ಕಳನ್ನು ಅಗಲಿದ್ದಾರೆ.