ಡಾ|ಕೌಶಿಕ್ ಗೌಡ ಚಿದ್ಗಲ್ ರವರಿಗೆ ಮೈಸೂರಿನಲ್ಲಿ ಅಭಿನಂದನಾ ಕಾರ್ಯಕ್ರಮ

0

ಡಾ|ಕೌಶಿಕ್ ಗೌಡ ಚಿದ್ಗಲ್ ರವರು ಮಂಡಿಸಿದ modren judicial Trend for implementation of human rights ವಿಷಯದ ಪ್ರಬಂಧಕ್ಕೆ ಆಳ್ವರ್ಸ್ ಸನ್ ರೈಸ್ ರಾಜಸ್ಥಾನ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಕಾಲೇಜಿನ ವಿದ್ಯಾರ್ಥಿಗಳು ಅ. 17 ರಂದು ಅಭಿನಂದನಾ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿದರು.

ಕಾರ್ಯಕ್ರಮದ ಆಯೋಜಕರಾದ ಭಾನುಪ್ರಕಾಶ್ ಮತ್ತು ಸ್ನೇಹಿತರು, ರಾಮಕೃಷ್ಣರವರು ಸ್ವಾಗತ ಕೋರಿದವರು.

ಭಾಸ್ಕರ್, ಪ್ರಸನ್ನ, ಸಂಜಯ್ ಕೌಶಿಕ್ ರವರನ್ನು ಸನ್ಮಾನಿಸಿದರು.

ಕಾಳಿಂಗರಾಯ ಕಾರ್ಯಕ್ರಮ ನಿರೂಪಿಸಿದರು.


ಶಿವಕುಮಾರ್ ವಂದಿಸಿದರು.
ಹಾಗೂ ಈ ಸಂದರ್ಭದಲ್ಲಿ ಕಾರ್ತಿಕ್ ಮತ್ತು ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೌಶಿಕ್ ರವರು ಪ್ರಸ್ತುತ ಮೂಡಬಿದಿರೆಯ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಇಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.