ಸುಬ್ರಹ್ಮಣ್ಯ: ಕುಮಾರಧಾರ ಸ್ನಾನ ಘಟ್ಟದಲ್ಲಿ ನೀರಲ್ಲಿ ಕೊಚ್ಚಿ ಹೋಗಲಿದ್ದ ವೃದ್ದರೊಬ್ಬರ ರಕ್ಷಣೆ

0

ಕರ್ತವ್ಯ ಪ್ರಜ್ಞೆ
ಮೆರೆದ ಭದ್ರತಾ ಸಿಬ್ಬಂದಿಗಳು

ಕುಮಾರಧಾರ ಸ್ನಾನ ಘಟ್ಟದ ಬಳಿ ಸ್ನಾನಕ್ಕೆ ಬಂದ ವೃದ್ದ ರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ವೃದ್ದರೊಬ್ಬರನ್ನು
ಭದ್ರತಾ ಸಿಬ್ಬಂದಿಗಳು ರಕ್ಷಿಸಿದ ಘಟನೆ ಅ. 18 ರ ಬೆಳಗ್ಗೆ ನಡೆದಿದೆ.

ನೀರಿಗಿಳಿದಿದ್ದ ವೃದ್ದ ನೀರಲ್ಲಿ ಕೊಚ್ಚಿ ಹೋಗುವುದು ಗಮನಿಸಿದ ಭದ್ರತಾ ಸಿಬ್ಬಂದಿಗಳು ತಕ್ಷಣ ಅವರನ್ನು ರಕ್ಷಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.


ದೇವಾಲಯದ ಭದ್ರತಾ ಸಿಬ್ಬಂದಿಯಾದ ಲೋಕನಾಥ್ ಮತ್ತಿತರರು ಸೇರಿ ಅವರನ್ನು ರಕ್ಷಿಸಿ ದಡಕ್ಕೆ ತಂದು ಅವರೊಂದಿಗೆ ಬಂದವರಿಗೆ ಹಸ್ತಾಂತರಿಸಿದ್ದಾಗಿ ತಿಳಿದು ಬಂದಿದೆ.