ಸುಳ್ಯ ತಾಲೂಕಿನಲ್ಲಿ 12 ಗಂಟೆಯ ವೇಳೆಗೆ ಶೇ. 87 ಮತದಾನ

0

ವಿಧಾನ ಪರಿಷತ್‌ಗೆ ಸುಳ್ಯ ತಾಲೂಕಿನ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ಚುನಾವಣೆಯಲ್ಲಿ ಇದೀಗ 12 ಗಂಟೆಯವರೆಗೆ ಶೇ. 87 ಮತದಾನವಾಗಿದೆ.


ಸುಳ್ಯ ನಗರ ಪಂಚಾಯತ್‌ನಲ್ಲಿ ಇದ್ದ ಎಲ್ಲಾ 21 ಮತಗಳೂ ಚಲಾಯಿತಗೊಂಡಿವೆ. ಐವರ್ನಾಡು 13, ಅರಂತೋಡು 15, ಮಂಡೆಕೋಲು 14, ಅಜ್ಜಾವರ 18, ಸಂಪಾಜೆ 14, ಮಡಪ್ಪಾಡಿ 5, ನೆಲ್ಲೂರು ಕೆಮ್ರಾಜೆ 7, ದೇವಚಳ್ಳ 1೦, ಪಂಜ 13, ಮುರುಳ್ಯ 7 ಈ ಪಂಚಾಯತ್‌ಗಳಲ್ಲಿ ಶೇ. 1೦೦ ಮತ ಚಲಾವಣೆಗೊಂಡಿದೆ. ಉಳಿದ 15 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 57 ಮತಗಳು ಚಲಾವಣೆಗೆ ಬಾಕಿ ಇವೆ.