ಸುಳ್ಯದಲ್ಲಿ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರ

0

ಸ್ವ ಉದ್ಯೋಗದ ತರಬೇತಿ ಪಡೆದು ಸ್ವಾವಲಂಬಿಗಳಾಗಿರುವುದು ಶ್ಲಾಘನೀಯ : ವೀರಪ್ಪ ಗೌಡ ಕಣ್ಕಲ್

ಅರಿವು ಕೃಷಿ ಕೇಂದ್ರದ ವತಿಯಿಂದ ನಡೆಯುವ ಉದ್ಯೋಗ ಆಕಾಂಕ್ಷೀಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರವು ಸುಳ್ಯದ ಶ್ರೀಹರಿ ಬಿಲ್ಡಿಂಗ್‌ನಲ್ಲಿರುವ ರಂಗಮಯೂರಿ ಕಲಾಶಾಲೆಯಲ್ಲಿ ಅ. 21 ರಂದು ನಡೆಯಿತು.

ಸುಳ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ” ಅರಿವು ಕೇಂದ್ರದ ಮೂಲಕ ಅನೇಕರು ಸ್ವ ಉದ್ಯೋಗದ ತರಬೇತಿ ಪಡೆದು ಸ್ವಾವಲಂಬಿಗಳಾಗಿರುವುದು ಶ್ಲಾಘನೀಯ ” ಎಂದರು.

ಸುಳ್ಯ ತಾಲೂಕು ಸಂಜೀವಿನಿ ಒಕ್ಕೂಟದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಶ್ವೇತಾರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಂಜೀವಿನಿ ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆಯ ದ.ಕ. ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಉದ್ಯಮ ಪ್ರಾರಂಭಿಸುವಲ್ಲಿಂದ ಹಿಡಿದು ಯಂತ್ರೋಪಕರಣಗಳು, ಸಾಲ, ಸಬ್ಸಿಡಿ ಮತ್ತು ಮಾರುಕಟ್ಟೆಯವರೆಗಿನ ಮಾಹಿತಿ,
ಪ್ರತಿಯೊಬ್ಬರ ದಾಖಲಾತಿ ಜೋಡಣೆ ಮತ್ತು ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿತೆ ನಡೆಯಿತು.

ಅರಿವು ಕೇಂದ್ರದ ಮುಖ್ಯಸ್ಥ ಡಾ. ಯು.ಪಿ ಶಿವಾನಂದ, ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಕೃಷ್ಣ ಬೆಟ್ಟ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಹಸೈನಾರು ಜಯನಗರ ವಂದಿಸಿದರು. ಸುದ್ದಿ ಕೃಷಿ ಸೇವಾ ಕೇಂದ್ರದ ನಿರ್ವಾಹಕಿ ರಮ್ಯಾ ಸತೀಶ್ ಕಳಂಜ, ಸುದ್ದಿ ವರದಿಗಾರ ಶ್ರೀಜಿತ್ ಸಂಪಾಜೆ ಸಹಕರಿಸಿದರು.

ಡಾ. ಸುರೇಶ್ ಕುಮಾರ್ ಕುಡೂರು ಹೊಸಮಠ, ಶ್ರೀಮತಿ ದೇವಕಿ ಎಸ್. ಕುಡೂರು, ಟಿ. ಪ್ರಸನ್ನ ಬಾಳುಗೋಡು, ಯಶೋಧ ಕಜೆ, ಚೇತನ್ ಕುಕ್ಕುಜಡ್ಕ, ಲಲಿತಾ ಈಶ್ವರಮಂಗಲ, ವಿನಯ್ ಪುತ್ತೂರು, ಹೇಮಲತಾ ಕೆ.ಪೇರಾಲು, ರಂಜಿತ್ ಕೊಯಿಲ, ನಾಗರಾಜ್ ಜಯನಗರ, ಮೀನಾಕ್ಷಿ ಮುರುಳ್ಯ, ದಿನೇಶ್ ಕುಮಾರ್ ಮುರುಳ್ಯ, ಮೋಹಿನಿ (ನಿಶಾ ) ಸಂಪಾಜೆ, ತಾರಾನಾಥ್ ಬೆಳ್ಳಾರೆಯವರು ತರಬೇತಿಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.