ದಲಿತ ದೌರ್ಜನ್ಯಗೈದ 98 ಮಂದಿಗೆ ಜೀವಾವಧಿ ಜೈಲು ಶಿಕ್ಷೆ ಸ್ವಾಗತಾರ್ಹ : ಆದಿ ದ್ರಾವಿಡ ಯುವ ವೇದಿಕೆ

0

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಎಂಬಲ್ಲಿ 10 ವರ್ಷ ಹಿಂದೆ ನಡೆದ ದಲಿತ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಾಗಿದ್ದ 101 ಮಂದಿ ಆರೋಪಿಗಳಲ್ಲಿ 98 ಮಂದಿಗೆ ಜೀವಾವಧಿ ಹಾಗೂ 3 ಮಂದಿಗೆ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆ ಜಿಲ್ಲೆಯ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿರುವುದು ಐತಿಹಾಸಿಕವಾದುದು ಎಂದು ಸುಳ್ಯ ತಾಲೂಕು ಆದಿದ್ರಾವಿಡ ಯುವ ವೇದಿಕೆ ಅಧ್ಯಕ್ಷ ಎಂ.ಮೋನಪ್ಪ ಮಂಡೆಕೋಲು ಸ್ವಾಗತಿಸಿದ್ದಾರೆ.” ಭಾರತದ ಸಂವಿಧಾನ ಎಲ್ಲ ದೇಶವಾಸಿಗಳಿಗೆ ಸಮಾನತೆಯ ಜೀವನವನ್ನು ನೀಡಿದ್ದರೂ, ಅಸ್ಪೃಶ್ಯತೆ, ಜಾತೀಯತೆ ಇನ್ನೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಕೊಪ್ಪಳ ನ್ಯಾಯಾಲಯ ನೀಡಿರುವ ತೀರ್ಪು ಸಂವಿಧಾನದ ನಿಜವಾದ ಮೌಲ್ಯವನ್ನು ಎತ್ತಿ ಹಿಡಿದು ಸಮಾಜ ಕಣ್ಣು ತೆರೆಯುವಂತೆ ಮಾಡಿದೆ ” ಎಂದು ಎಂ.ಮೋನಪ್ಪರು ಹೇಳಿಕೆಯಲ್ಲಿ ತಿಳಿಸಿದ್ದಾರೆ.