ಡಾ.ಉಮ್ಮರ್ ಬೀಜದಕಟ್ಟೆಯವರಿಗೆ ಸಾಹಿತ್ಯ ಪ್ರಶಸ್ತಿ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ನವಂಬರ್ 3ರಂದು ಗೂನಡ್ಕದ ಸಜ್ಜನ ಪ್ರತಿಷ್ಠಾನ ಸಬಾಭವನದಲ್ಲಿ ಜರಗಲಿದೆ.
2022 ರಲ್ಲಿ ನಡೆದ 26 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಉಮರ್ ಬೀಜದಕಟ್ಟೆ ರವರಿಗೆ ಸಾಹಿತ್ಯೋತ್ಸವ ವೇದಿಕೆಯಲ್ಲಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಸಮಾರಂಭವೂ ನಡೆಯಲಿದೆ.
ಸುಳ್ಯ ಡಿವಿಷನ್ ನ ನಾಲ್ಕು ಸೆಕ್ಟರ್ ಗಳ ಸಾಹಿತ್ಯೋತ್ಸವಗಳಲ್ಲಿ ಪ್ರಥಮ ಸ್ಥಾನಿಗಳಾದವರು ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನಿಗಳಾಗಲು ಪರಸ್ಪರ ಸೆಣಸಾಡಲಿದ್ದಾರೆ. ನವಂಬರ್ 3 ಬೆಳಗ್ಗೆ ಝಿಯಾರತ್, ಧ್ವಜಾರೋಹಣ, ಉದ್ಘಾಟನಾ ಸಮಾರಂಭಗಳೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ಸಮಾರೋಪ ಸಂಗಮ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ,ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.
ಗೂನಡ್ಕ ಜುಮಾ ಮಸ್ಜಿದ್ ಆಡಳಿತ ಸಮಿತಿ, ಗೂನಡ್ಕ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ಮತ್ತು ಅಲ್ ಅಮೀನ್ ಕಾರ್ಯಕ್ರಮದ ಸರ್ವ ಸಜ್ಜೀಕರಣಗಳು ನಡೆಸುತ್ತಿದ್ದು ಪ್ರತಿಭೆಗಳ ಸ್ವಾಗತ ಮತ್ತು ಆತಿಥ್ಯಗಳಿಗೆ ಬೇಕಾದ ಎಲ್ಲಾ ತಯಾರಿಗಳು ನಡೆಯುತ್ತಿದೆ. ನವಂಬರ್ 3ರ ಸುಳ್ಯ ಸಾಹಿತ್ಯೋತ್ಸವ ನವ ಕ್ರಾಂತಿಯೊಂದನ್ನು ಸೃಷ್ಠಿಸಲಿದೆ ಎಂದು ಸುಳ್ಯ ಡಿವಿಷನ್ ಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ದೀಖ್ ಹಿಮಮಿ ಸಖಾಫಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.