ರಸ್ತೆ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು , ಸಂಘ ಸಂಸ್ಥೆಗಳು, ಊರ ಮುಖಂಡರ ಪೂರ್ವಭಾವಿ ಸಭೆ
ರಸ್ತೆ ಅಭಿವೃದ್ಧಿ ಸಮಿತಿ ರಚನೆ
ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ , ಕಾರ್ಯದರ್ಶಿಯಾಗಿ ಆನಂದ ಕಲ್ಲಗದ್ದೆ
ಅರಂತೋಡು- ತೊಡಿಕಾನ- ಪಟ್ಟಿ- ಭಾಗಮಂಡಲ ರಸ್ತೆಯ ಅಭಿವೃದ್ಧಿಯ ಬಗ್ಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯನ್ನು ಅ.30ರಂದು ಕರೆಯಲಾಯಿತು.
ಈ ದಿನದ ಸಭೆಯ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ವಹಿಸಿದ್ದರು. ವೇದಿಕೆಯಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್,ಕೇಶವ ಯು.ಕೆ, ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ವಸಂತ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ರಸ್ತೆ ಅಭಿವೃದ್ಧಿ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಪ್ರೇಮಾ ವಸಂತ ಭಟ್,ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ , ಉಪಾಧ್ಯಕ್ಷರಾಗಿ ಎ.ಸಿ ಉತ್ತಪ್ಪ ಅಮೆಮನೆ, ಕೇಶವ ಅಡ್ತಲೆ, ಯು.ಎಂ.ಕಿಶೋರ್ ಕುಮಾರ್, ಕೇಶವ ಯು.ಕೆ, ಗೌರಿಶಂಕರ ಗಾಳಿವನ, ಕೇಶವಪ್ರಸಾದ್ ತೊಡಿಕಾನ, ಎ.ಜಿ.ಕರುಣಾಕರ, ಕಾರ್ಯದರ್ಶಿಯಾಗಿ ಆನಂದ ಕಲ್ಲಗದ್ದೆ, ಜತೆ ಕಾರ್ಯದರ್ಶಿಯಾಗಿ ರವೀಂದ್ರ ಪಂಜಿಕೋಡಿ, ಕೋಶಾಧಿಕಾರಿಯಾಗಿ ವಿಜೇತ್ ಮರುವಳ, ಕಾನೂನು ಸಲಹೆಗಾರರಾಗಿ ದೀಪಕ್ ಕುತ್ತಮೊಟ್ಟೆ, ಮತ್ತು 17 ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.