ಚೆಂಬು ಗ್ರಾಮದ ದಬ್ಬಡ್ಕ ಹೊಸೂರು ಕಾರ್ಯಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.28ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕಾರ್ಯಪ್ಪ ಹೊಸೂರು ಅವರು ದಬ್ಬಡ್ಕ ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಅರ್ಚಕರಾಗಿ, ಚೆಂಬು ಶ್ರೀ ಉಳ್ಳಾಕುಳು ದೇವಸ್ಥಾನದ ಪುರುಷ ದೈವದ ಪೂಜಾರಿಯಾಗಿ, ಊರುಗೌಡರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಬೋಜಮ್ಮ, ಪುತ್ರರಾದ ಹೇಮಾಧರ, ಗುರುಪ್ರಸಾದ, ಪುತ್ರಿಯರಾದ ನೇತ್ರಾವತಿ ಅಂಬ್ರೋಟಿ, ಗೀತಾ ಮಹಾಬಲ ಪೆರುಮುಂಡ, ದಿವ್ಯ ಕುವೆಂದ್ರ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.