ಕರ್ನಾಟಕ ಸರ್ಕಾರದ ಪಿ ಡಬ್ಲ್ಯೂಡಿ ಇಲಾಖೆಯಿಂದ ಕೋಲ್ಚಾರು – ಪೈಂಬೆಚ್ಚಾಲ್ – ಅಜ್ಜಾವರ ಕಾಂಕ್ರೀಟ್ ಕರಣಗೊಂಡ ರಸ್ತೆ ನ.1 ರಂದು ಲೋಕಾರ್ಪಣೆ ಗೊಂಡಿತು.
ಈ ರಸ್ತೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರದಿಂದ ಸುಮಾರು 700 ಮೀಟರ್ ಉದ್ದದ ರಸ್ತೆಗೆ ಸುಮಾರು 50 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಇದರ ಗುದ್ದಲಿಪೂಜೆ ಶಿಲಾನ್ಯಾಸ ಕಾರ್ಯಕ್ರಮವನ್ನು ಸುಳ್ಯದಲ್ಲಿ ಕೆಲವು ತಿಂಗಳುಗಳ ಹಿಂದೆ ಮಾನ್ಯ ಕರ್ನಾಟಕ ಘನ ಸರಕಾರದ ಆರೋಗ್ಯ ಸಚಿವರು ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಸಮ್ಮುಖದಲ್ಲಿ ನಡೆದಿತ್ತು.
ಇದೀಗ ಇದರ ಕಾಮಗಾರಿಯು ಸಂಪೂರ್ಣಗೊಂಡಿದ್ದು ರಸ್ತೆಯನ್ನು ಇಂದು ಸಾರ್ವಜನಿಕರಿಗೆ ಉಪಯೋಗಿಸಲು ಅನುವು ನೀಡಲು ಉದ್ಘಾಟನೆ ಮಾಡಲಾಯಿತು ಎಂದು ಕಾರ್ಯಕ್ರಮದ ಸಂಫಟಕರು ತಿಳಿಸದ್ದಾರೆ.
ನೂತನ ರಸ್ತೆಯನ್ನು ಸ್ಥಳೀಯರಾದ ದಾಮೋದರ ಕೂಳಿಯಡ್ಕ ಇವರು ರಿಬ್ಬನ್ ಕಟ್ ಮಾಡುವುದರ ಜೊತೆಗೆ, ವಾರ್ಡಿನ ಸದಸ್ಯರಾದ ಕುಸುಮ ಬಿಲ್ಲರಮಜಲು ಇವರು ತೆಂಗಿನಕಾಯಿ ಒಡೆಯುವುದಾರ ಮೂಲಕ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಗೀತಾ ಕೋಲ್ಚಾರ್ , ಧರ್ಮಪಾಲ ಕೊಯಿಂಗಾಜೆ,ಕುಸುಮ ಬಿಲ್ಲರಮಜಲು, ಸತ್ಯಕುಮಾರ್ ಆಡಿಂಜ, ಮೀನಾಕ್ಷಿ ಕುಡೇಕಲ್ಲು, ಕಾಂಗ್ರೆಸ್ ನಾಯಕರಾದ ಮೂಸಾ ಪಿ ಎಂ, ಆರೀಫ್ ಇಬ್ರಾಹಿಂ ತೆಕ್ಕಿಲ್, ನಿಸಾರ್ ತೋಟಕೋಚ್ಚಿ, ಮನೋಹರ ಕಾರ್ತಡ್ಕ ಊರವರಾದ ಚಂದ್ರಶೇಖರ ಕೆ ವಿ ಕೋಲ್ಚಾರ್ , ಇಬ್ರಾಹಿಂ ಪಾರೆ, ಚಂದ್ರ ಹಾಸ್ಪರೆ, ಪಾರ್ವತಿ ನರೇಂದಗುಳಿ ಹಾಗೂ ಆ ಭಾಗದ ಫಲಾನುಭವಿಗಳು ಉಪಸ್ಥಿತರಿದ್ದರು.