ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ (69ನೇ) ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಎಸ್.ಡಿ.ಎಂ.ಸಿ ಸದಸ್ಯ ಅಚ್ಚುತ ಮುಂಡೋಕಜೆ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿದ್ದರು.


ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡನಾಡು ನುಡಿಯ ಮಹತ್ವದ ಬಗ್ಗೆ ಸಮಾಜ ವಿಜ್ಞಾನ ಶಿಕ್ಷಕರಾದ ವಸಂತನಾಯಕ್ ಡಿ ಅವರು ವಿದ್ಯಾರ್ಥಿಗಳಿಗೆ ಭಾಷಣ ಹಾಗು ಹಾಡಿನ ಮೂಲಕ ತಿಳಿಸಿಕೊಟ್ಟರು‌. ಕನ್ನಡ ಶಿಕ್ಷಕಿ ಸಂಗೀತಾ ಸಿ ವಿ. ಅವರು ಕನ್ನಡ ರಾಜ್ಯೋತ್ಸವದ ಬಗ್ಗೆ, ಕನ್ನಡ ಕವಿಗಳ ವಿಶೇಷತೆಯ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿ ನಾಯಕಿ ಹತ್ತನೇ ತರಗತಿ ರಕ್ಷಿತಾ ಪಿ.ಎಲ್.ಅವರು ಕನ್ನಡ ನುಡಿಯ ಬಗ್ಗೆ ಮಾತನಾಡಿದಳು.

ಸ್ಕೌಟ್ ಗೈಡ್ ವಿದ್ಯಾರ್ಥಿ/ನಿಯರು ಕನ್ನಡಾಭಿಮಾನ ಸೂಸುವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.


ಮುಖ್ಯ ಗುರುಗಳಾದ ಶ್ರೀಮತಿ ಸಂಧ್ಯಾ ಕೆ. ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಶಿಕ್ಷಕಿ ಅನುಷಾ ವಂದಿಸಿದರು. ಗಣಿತ ಶಿಕ್ಷಕರಾದ ಮುರಳೀಧರ ಪುನ್ಕುಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.