ಐವರ್ನಾಡು : ಪುಷ್ಪಾವತಿ ಶಾಂತಿಮೂಲೆಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ಶಾಂತಿಮೂಲೆ ಮನೆ ಪುಷ್ಪಾವತಿಯವರು ಅ.24 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ನ.04 ರಂದು ಶಾಂತಿಮೂಲೆ ಮನೆಯಲ್ಲಿ ನಡೆಯಿತು.


ಕೀರ್ತನ್ ಬೋಳುಗುಡ್ಡೆಯವರು ದಿ.ಪುಷ್ಪಾವತಿ ಶಾಂತಿಮೂಲೆಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನ ಸಲ್ಲಿಸಿದರು.


ಆಗಮಿಸಿದ ನೂರಾರು ಜನರು ಪುಷ್ಪಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ಈ ಸಂದರ್ಭದಲ್ಲಿ ಪುತ್ರರಾದ ವಿಶ್ವನಾಥ ಶಾಂತಿಮೂಲೆ, ಪುರಂದರ ಶಾಂತಿಮೂಲೆ,ಯತೀಂದ್ರ ಶಾಂತಿಮೂಲೆ,ಮೋಹನ ಶಾಂತಿಮೂಲೆ ಪುತ್ರಿಯರಾದ ಶ್ರೀಮತಿ ಸುನಿತಾ,ಶ್ರೀಮತಿ ಉಷಾಕುಮಾರಿ, ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.