ಪಂಜ ಲಯನ್ಸ್ ಕ್ಲಬ್ ವತಿಯಿಂದ ಏನೇಕಲ್ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಶಶಿಧರ್ ಪಳಂಗಾಯ ಧ್ವಜಾರೋಹಣಗೈದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಲ. ಬಾಲಕೃಷ್ಣ ಮೂಲೆಮನೆ ವೇದಿಕೆಗೆ ಆಹ್ವಾನಿಸಿದರು. ಲ.ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಯಶವಂತ ರೈ ಸದಸ್ಯರು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯ ಮಹತ್ವ ,ಅಗತ್ಯತೆಗಳ ಬಗ್ಗೆ ವಿವರಿಸಿದರು.
ವಲಯಾಧ್ಯಕ್ಷರಾದ ಲ. ರoಗಯ್ಯ ಶೆಟ್ಟಿಗಾರ್ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕ ರಮೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ವಾಗತಿಸಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪಂಜ ಲಯನ್ಸ್ ಕ್ಲಬ್ ನ ವತಿಯಿಂದ 8 ಜ್ಞಾನಪೀಠ ಪುರಸ್ಕೃತರ ಭಾವಚಿತ್ರವನ್ನು ಏನೆಕಲ್ ಸರಕಾರಿ ಪ್ರೌಢಶಾಲೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಖಜಾಂಜಿ ಲ.ಸುರೇಶ್ ನಡ್ಕ , ಜೊತೆ ಕಾರ್ಯದರ್ಶಿ ವಾಸುದೇವ ಮೇಲ್ತಾಡಿ ಉಪಸ್ಥಿತರಿದ್ದರು.