ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ನ.೯ರಂದು ಆಚರಿಸಲಾಯಿತು.
ಅತಿಥಿಯಾಗಿ ಬಿಒ ಕಛೇರಿಯ ಸಿಆರ್‌ಪಿ ಮಮತಾ ರವರು ಆಗಮಿಸಿದ ಮಕ್ಕಳಿಗೆ ಶಿಶು ಗೀತೆಗಳನ್ನು ಹೇಳಿಕೊಟ್ಟರು. ಕನ್ನಡದ ಕವಿತೆ, ಗಾದೆ ಮಾತುಗಳು ಹಾಗೂ ಹಾಡುಗಳನ್ನು ಮಕ್ಕಳು ಪ್ರಸ್ತುತ ಪಡಿಸಿದರು. ಬಳಿಕ ಶಿಕ್ಷಣ ಇಲಾಖೆಯಿಂದ ಕೊಡಲಾದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಶಾಲಾ ಶಿಕ್ಷಕಿ ಪ್ರಮೀಳಾ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಸಂಚಾಲಕಿ ಶ್ರೀಮತಿ ಗೀತಾಂಜಲಿ ಕನ್ನಡ ನಾಡಿನ ಕವಿಗಳ ಬಗ್ಗೆ ಹಾಗೂ ಕನ್ನಡ ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕ ವೃಂದ ಸಹಕರಿಸಿದರು.