ಗೌಡರ ಯುವ ಸೇವಾ ಸಂಘ, ತಾಲೂಕು ಮಹಿಳಾ ಘಟಕ ಸುಳ್ಯ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆಯ ಬಹುಮಾನ ವಿತರಣೆಯು ನ.೯ರಂದು ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎ.ಬಿ. ರಾಮಣ್ಣ ಗೌಡ ಶಿರಾಜೆ ಕಟ್ಟೆಮನೆ ಅಜ್ಜಾವರ ಇವರು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ದಾಮೋದರ ಪಾತಿಕಲ್ಲು, ಹಾಗೂ ತೃತೀಯ ಬಹುಮಾನವನ್ನು ರಾಜಣ್ಣ ಪೇರಾಲುಮೂಲೆ ಪಡೆದುಕೊಂಡರು.
ದಯಾನಂದ ಬುಡ್ಲೆಗುತ್ತು, ಚೌಟಾಜೆ ತರವಾಡು ಮನೆಯವರು, ರಾಧಾಕೃಷ್ಣ ಗುಡ್ಡೆಮನೆ ಪೈಲಾರು, ಪುರುಷೋತ್ತಮ ಪಾತಿಕಲ್ಲು, ವಸಂತ ಕುಮಾರ ಕೆ.ಹೆಚ್. ಕಾಡುಪಂಜ, ಕರುಣಾಕರ ಪಾತಿಕಲ್ಲುರವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದ ವೇದಿಕೆಯಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಗೌಡ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ವೆಂಕಟ್ರಮಣ ಕ್ರೆಡಿಟದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಗೌರವಾಧ್ಯಕ್ಷೆ ಪುಷ್ಪಾ ಮಾಣಿಬೆಟ್ಟು, ಗೌಡರ ಯುವ ಸೇವಾ ಸಂಘದ ನಿಕಟಪೂರ್ವಾಧ್ಯಕ್ಷ ಚಂದ್ರಾ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತಾಲೂಕು ಮಹಿಳಾ ಘಟಕದ ಉಸ್ತುವಾರಿ ಸುರೇಶ್ ಅಮೈ ಉಪಸ್ಥಿತರಿದ್ದರು.
ಸುಳ್ಯ ಎನ್ನೆಂಸಿ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಹಬ್ಬಗಳ ಆಚರಣೆ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹಿಳಾ ಘಟಕದ ಕೋಶಾಧಿಕಾರಿ ಜಯಶ್ರೀ ಪಲ್ಲತಡ್ಕ ಪ್ರಾರ್ಥಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು.