ಸಮಾವೇಶದ ಮೂಲಕ ಮರಾಟಿಗರು ಸಮಾಜಕ್ಕೆ ಶಕ್ತಿ ತುಂಬಿದ್ದಾರೆ – ಅಶೋಕ್ ಕುಮಾರ್ ರೈ
ಸಮಾವೇಶದ ಮೂಲಕ ಸಮುದಾಯದ ಭವಿಷ್ಯದ ಚಿಂತನೆಯಾಗಿದೆ – ಭಾಗೀರಥಿ ಮುರುಳ್ಯ
ಸರಕಾರಕ್ಕೆ ನೀಡಿದ ಮನವಿಯನ್ನು ಪೊಲೊ ಅಫ್ ಮಾಡಬೇಕಿದೆ – ಡಾ. ಬಾಲಕೃಷ್ಣ ಸಿ.ಹೆಚ್.
ಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನ. 10ರಂದು ನಡೆದ ಕರಾವಳಿ ಮರಾಟಿ ಸಮಾವೇಶದ ಸಮಾರೋಪ ಸಮಾರಂಭ ಸಂಜೆ ಸಮಾವೇಶದ ಅಧ್ಯಕ್ಷ ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಹೆಚ್. ರಾಜೇಶ್ ಪ್ರಸಾದ್ ಐಎಎಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ. ಅತಿಥಿಗಳಾಗಿ ಅಗಮಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ನಾನು ವೇದಿಕೆಯಲ್ಲಿ ನಿಂತು ಮಾತನಾಡಬೇಕಾದರೆ ಅದಕ್ಕೆ ಮರಾಟಿ ಸಮುದಾಯದವರದ್ದು ಕೊಡುಗೆ ಇದೆ. ಈಗಿನ ಸರಕಾರ ಎಸ್.ಟಿಗಳ ಏಳಿಗೆಗಾಗಿ ಸುಮಾರು 9 ಸಾವಿರ ಕೋಟಿ ನೀಡಿದೆ ಎಂದರು. ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ ಉದ್ಯೋಗ ಮೇಳದ ಮೂಲಕ ಸಮಾಜದ ಹಲವು ವಿದ್ಯಾವಂತರಿಗೆ ಉದ್ಯೋಗ ಲಭಿಸಿದೆ. ಸಮಾಜ ಮುಂದೆ ಬರಬೇಕಾದರೆ ವಿಚಾರ ವಿಮರ್ಶೆ ಆಗಬೇಕು ಭವಿಷ್ಯದ ಚಿಂತನೆಯಾಗಬೇಕು. ಅದು ಈ ಸಮಾವೇಶದ ಮೂಲಕ ನೆರವೇರಿದೆ ಎಂದರು. ಸಮಾರೋಪ ಮಾತುಗಳನ್ನಾಡಿದ ಸಮಾವೇಶದ ಸಂಚಾಲಕರಾದ ಡಾ. ಬಾಲಕೃಷ್ಣ ಸಿ.ಹೆಚ್ ಮಾತನಾಡಿ ಯುವ ಜನತೆ ನಮ್ಮ ಆಚಾರ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಸಮಾವೇಶದ ಮೂಲಕ ಸರಕಾರಕ್ಕೆ ಸಲ್ಲಿಸಿದ ಮನವಿಯನ್ನು ಮುಂದಿನ ದಿನಗಳಲ್ಲಿ ಪೊಲೋ ಅಫ್ ಮಾಡಬೇಕಿದೆ ಎಂದರು.
ಸಮಾವೇಶದ ಗೌರವಾಧ್ಯಕ್ಷ ಡಾ. ಕೆ. ಸುಂದರ ನಾಯ್ಕ್, ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ್, ಸಹ ಸಂಚಾಲಕ ಪ್ರಕಾಶ್ ನಾಯ್ಕ್, ಬೆಂಗಳೂರು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ರಾಮ ನಾಯ್ಕ್, ಸೇರಿದಂತೆ ಸಲಹಾ ಸಮಿತಿ ಪದಾಧಿಕಾರಿಗಳು, ವಿವಿಧ ತಾಲೂಕು ಮತ್ತು ಜಿಲ್ಲಾ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಗಳ ಅಧ್ಯಕ್ಷರುಗಳು, ಸಂಚಾಲಕರಿಗೆ ಮತ್ತು ಸಮಾವೇಶದ ಪ್ರಧಾನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಶ್ವನಾಥ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಮರಾಟಿ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ ಸ್ವಾಗತಿಸಿ, ಸತೀಶ್ ನಾಯ್ಕ್ ವಂದಿಸಿದರು.
ಸಮಾರೋಪ ಸಮಾರಂಭದ ಬಳಿಕ ಆಳ್ವಾಸ್ ಸಂಸ್ಥೆಯ ನುರಿತ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.