ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಹೊಲಿಗೆ ಯಂತ್ರ ವಿತರಣೆ

0

ಸುಬ್ರಹ್ಮಣ್ಯ ಸಮೀಪದ ದೇವರ ಹಳ್ಳಿಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನವರು ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆ ಅನ್ವಯ ಒದಗಿಸಿದ 10 ಹೊಲಿಗೆ ಯಂತ್ರಗಳನ್ನು ನ.7 ವಿತರಿಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ರೋಟರಿ ಕ್ಲಬ್ಬಿನ ಅಧ್ಯಕ್ಷ ಶಿವಾನಂದ ಜಿ. ಎಸ್, ಬೆಂಗಳೂರು ರೋಟರಿ ಜಿಲ್ಲೆ 3192ರ ಸಹಾಯಕ ಗವರ್ನರ್ ಸಂದೀಪ್ ಬಿ ಎಸ್ , ರೋಟರಿ ಜಿಲ್ಲೆ 3192ರ ಮೆಂಬರ್ಶಿಪ್ ಚೇರ್ಮನ್ ಆರ್ ಮಹೇಶ್, ರೋಟರಿ ಜಿಲ್ಲೆ 31 81ರ ಸಮುದಾಯ ವಿಭಾಗದ ಜಿಲ್ಲಾ ಕಾರ್ಯದರ್ಶಿ ಸಚ್ಚಿದಾನಂದ, ವಲಯ ಐದರ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಪ್ರಯೋಜಕತ್ವದ ರೂವಾರಿ ಬೆಂಗಳೂರು ಐಟೆಲ್ ಕಂಪನಿ ಎಚ್.ಆರ್.ದಿನೇಶ್ ಅತ್ಯಾಡಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚಿದಾನಂದ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವರಹಳ್ಳಿ ಹೋಲಿಗೆ ತರಬೇತಿ ಕೇಂದ್ರದ ತರಬೇತುದಾರರಾದ ಗಾಯತ್ರಿ, ಮಮತಾ ಹಾಗೂ ಫಲಾನುಭವಿಗಳು, ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಭರತ್ ನೇಕ್ರಾಜೆ, ಮಾಯಿಲಪ್ಪ ಸಂಕೇಶ, ಉಪ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ ,ಸುಬ್ರಹ್ಮಣ್ಯ ಅತ್ಯಾಡಿ ಹಾಜರಿದ್ದರು.


ಕಾರ್ಯದರ್ಶಿ ಚಿದಾನಂದ ಕುಳ ವಂದಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆ ಮಜಲ್ ನಿರೂಪಿಸಿದರು.