ಹೇಮಾವತಿ ಅಮೈ ರವರ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆ

0

ಉಬರಡ್ಕ ಮಿತ್ತೂರು ಗ್ರಾಮದ ಅಮೈ ಸುಂದರ ಪಾರೆಸ್ಟರ್ ರವರ ಪತ್ನಿ ಶ್ರೀಮತಿ ಹೇಮಾವತಿ ಅಲ್ಪ ಕಾಲದ ಅಸೌಖ್ಯದಿಂದ ಅ.23 ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆಯು ನ.11ರಂದು
ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು
.

ಮೃತರ ಬಗ್ಗೆ ನ್ಯಾಯವಾದಿಗಳಾದ ದಿನೇಶ್ ಮಡಪ್ಪಾಡಿ ರವರು ಗುಣಗಾನಗೈದು ನುಡಿ ನಮನ ಸಲ್ಲಿಸಿದರು.
ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಮೃತರ ಪುತ್ರ ವೇಣುಗೋಪಾಲ್, ಪುತ್ರಿ ಕವಿತಾ ಚಂದ್ರಶೇಖರ ಗೋಳ್ಯಾಡಿ, ಸೊಸೆ ಶ್ವೇತಾ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.