ನಾಳೆ ಪಡ್ಪಿನಂಗಡಿಯಲ್ಲಿ ಕ್ಲಾಸಿಕ್ ಸ್ಪೋಟ್ಸ್ ಕ್ಲಬ್‌ನಿಂದ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ

0

ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಮುಚ್ಚಿಲ ಇದರ ವತಿಯಿಂದ ಗ್ರಾಪಂ ಕಲ್ಮಡ್ಕ, ಕಲ್ಮಡ್ಕ ಕೃಷಿ ಪತ್ತಿನ ಸಹಕಾರಿ ಸಂಘ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸುಳ್ಯ ,ಲಯನ್ಸ್ ಕ್ಲಬ್ ಪಂಜ, ಎಂವೈಎಸ್ ಎಣ್ಣೂರು, ಯುನೈಟೆಡ್ ಯೂತ್ ಕೌನ್ಸಿಲ್ ನಿಂತಿಕಲ್ಲು, ರೆಕ್ಕ ಸ್ಪೋಟ್ಸ್ ಕ್ಲಬ್ ನಿಂತಿಕಲ್ಲು, ಬಿವೈಎ ಕರಿಂಬಿಲ, ಎಸ್‌ವೈಎಸ್ ಮುಚ್ಚಿಲ, ಎಸ್ಸೆಸ್ಸೆಫ್ ಎಣ್ಣೂರು, ನ್ಯೂ ಸ್ಟಾರ್ ಆರ್ಟ್ಸ್ ಆ್ಯಂಡ್ ಸ್ಪೋಟ್ಸ್ ಕ್ಲಬ್ ಅಯ್ಯನಕಟ್ಟೆ, ಯುವ ಸ್ಪೂರ್ತಿ ಸೇವಾ ಸಂಘ ಕಲ್ಮಡ್ಕ ಫ್ರೆಂಡ್ಸ್ ಸಮಾದಿ, ಫ್ರೆಂಡ್ಸ್ ಕ್ಲಬ್ ಕೂಡುರಸ್ತೆ ಕಾಣಿಯೂರು, ಬ್ಲಡ್ ಡೋನರ್ಸ್ ಮಂಗಳೂರು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಸಮಾರಂಭ ಮತ್ತು ಮಾಹಿತಿ ಕಾರ್ಯಾಗಾರ ನ.17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಪಡ್ಡಿನಂಗಡಿಯ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಲಿದೆ.

ಶಿಬಿರ ಉದ್ಘಾಟನೆಯನ್ನು ಕಲ್ಮಡ್ಕ ಗ್ರಾಪಂ ಅಧ್ಯಕ್ಷ ಮಹೇಶ್ ಕುಮಾ‌ರ್ ಕರಿಕ್ಕಳ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಜಮಾಲ್ ಎಣ್ಣೂರು ವಹಿಸಲಿದ್ದಾರೆ. ಸಮಾರಂಭದಲ್ಲಿ ರ್ಯಾಂಕ್ ವಿಜೇತ ಬಿಎಎಂಎಸ್ ವೈದ್ಯೆ ಡಾ.ಝಾಹಿದಾ ಯೂಸುಫ್ ಕೊಳ್ತಂಗರೆ ಮತ್ತು ನಿವೃತ ಸೈನಿಕ ಗಿರೀಶ್ ಎ.ಕೆ. ಅರ್ನೊಜಿ ಅವರನ್ನು ಕಲ್ಮಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ಸನ್ಮಾನಿಸಲಿದ್ದಾರೆ.

ಸುಳ್ಯ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ ರೈ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಾ ಗಾರವನ್ನು ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.