ಗೂನಡ್ಕ: ಮಾರುತಿ ಇಂಟರ್ ರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹಲವು ಪ್ರಶಸ್ತಿ

0

ದಕ್ಷಿಣ ಕನ್ನಡ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನವರು ನಡೆಸಿದ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮೌರ್ಯ ಪಿ. ಪಾನತ್ತಿಲ 7ನೇ ತರಗತಿ , ಹರ್ಷಿಕ್ ಪಿ. 7ನೇ ತರಗತಿ , ಮಹಮ್ಮದ್ ಶಾಹಿಂ ಕೆ. ಎ. 5ನೇ ತರಗತಿ, ಆರ್ಯ ಕೆ ಎಂ. 6ನೇ ತರಗತಿ, ಶ್ರೀಜಿತ್ ವೈ. 6ನೇ ತರಗತಿ, ಶ್ರವಣ್ ಕೊಯಿಂಗೋಡಿ 4ನೇ ತರಗತಿ, ಮಾನ್ಯತಾ ಪವನ್ ಯು. 6ನೇ ತರಗತಿ, ತಶ್ವಿಕ್ ಎಂ. 4ನೇ ತರಗತಿ., ಕುನಾಲ್ ಎನ್. ಎಲ್. 4ನೇ ತರಗತಿ, ಪ್ರಣವ್ ಎನ್. ಎಲ್. 7ನೇ ತರಗತಿಯ ವಿದ್ಯಾರ್ಥಿಗಳು ಕರಾಟೆಯ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ
ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕರಾಟೆ ತರಬೇತುದಾರರಾದ ಚಂದ್ರಶೇಖರ ಅವರು ತರಬೇತಿಯನ್ನು ನೀಡಿದ್ದಾರೆ.