ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಲಿಪಿಕಾ ಕೂಟೇಲುಗೆ ಪ್ರಶಸ್ತಿ

0

ದಕ್ಷಿಣ ಕನ್ನಡ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಇದರ ವತಿಯಿಂದ ಪುತ್ತೂರು ನ.ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ನ.17ರಂದು ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸ. ಹಿ. ಪ್ರಾ . ಶಾಲೆ ಓಜಾಳದ 6ನೇ ತರಗತಿಯ ವಿದ್ಯಾರ್ಥಿನಿ ಲಿಪಿಕಾ ಕರಾಟೆಯ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿ
ಪದಕ ಮತ್ತು ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರು ಕೊಡಗು ಸಂಪಾಜೆ ಗ್ರಾಮದ ಕೂಟೇಲು ಮನೆ ಸಂಜೀವ ಪೂಜಾರಿ ಮತ್ತು ಸುನಂದ ದಂಪತಿಯ ಪುತ್ರಿಯಾಗಿದ್ದಾರೆ.

ವಿದ್ಯಾರ್ಥಿನಿಗೆ ಕರಾಟೆ ತರಬೇತುರಾದ ಮಾಧವ ಎಂ. ಅಳಿಕೆ ತರಬೇತಿ ನೀಡಿದ್ದಾರೆ.