ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬಾಲ ಪ್ರತಿಭೋತ್ಸವ 2024 ಆಚರಣೆ

0

ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಪ್ರೌಢಶಾಲೆಯಲ್ಲಿ ಬಾಲ ಪ್ರತಿಭೋತ್ಸವ ಕಾರ್ಯಕ್ರಮ ನ.27ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಜಿರೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ.ಬಿ ಅಶೋಕ್ ಕುಮಾರ್ ಮೂಲೆಮಜಲು ಭಾಗವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ,” ಜ್ಞಾನ ಸಂಪಾದನೆಯೇ ವಿದ್ಯಾರ್ಥಿಗಳ ಮುಖ್ಯ ಗುರಿಯಾಗಿರಬೇಕು ” ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್ ರವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಸಂತೋಷ್ ಪಳಂಗಾಯ, ಸದಸ್ಯರಾದ ಪುರುಷೋತ್ತಮ ಬಿ. ಶಾಲಾ ಸಂಚಾಲಕಿ ಸಿಸ್ಟರ್ ಪಾವನ, ಶಾಲಾ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಟ್ರೀಸಾ ಜಾನ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 2023-2024ನೇ ಸಾಲಿನಲ್ಲಿ ತರಗತಿವಾರು ಕಲಿಕೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.

ಕಾರ್ಯ ಕ್ರಮದಲ್ಲಿ ಶಾಲಾ ಕನ್ನಡ ಸಹ ಶಿಕ್ಷಕಿಯಾದ ಶಾಂತಕುಮಾರಿ ಸ್ವಾಗತಿಸಿ, ಇಂಗ್ಲೀಷ್ ಶಿಕ್ಷಕರಾದ ರಜನೀಶ್ ವಂದಿಸಿ, ವಿಜ್ಞಾನ ಶಿಕ್ಷಕಿಯಾದ ಸುಧಾರಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.