ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ, ಶಾರದೋತ್ಸವ 2024 ಇದರ ವತಿಯಿಂದ ಜರುಗಿದ ಶಾರದೋತ್ಸವದ ಲೆಕ್ಕಾಚಾರ ಮಂಡನೆ ಸಭೆ ನ.27 ರಂದು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು.
ಶಾರದೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ ಮೇಲ್ಮನೆ ಸಭಾಧ್ಯಕ್ಷತೆ ವಹಿಸಿದ್ದರು. ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಉತ್ಸವ ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ ಬಳ್ಳಕ, ಕೋಶಾಧಿಕಾರಿ ದಿನೇಶ್ ಪಂಜದಬೈಲು, ಭಜನಾ ಮಂಡಳಿ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಕೋಶಾಧಿಕಾರಿ ಲೋಕೇಶ್ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಬಳ್ಳಕ ಸ್ವಾಗತಿಸಿದರು ಮತ್ತು ಲೆಕ್ಕಾಚಾರ ಮಂಡಿಸಿದರು. ದಿನೇಶ್ ಪಂಜದಬೈಲು ವಂದಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.