ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕಾಲಾವಧಿ ಪುದಿಯೊಡ್ಕಲ್ ಕಾರ್ಯಕ್ರಮವು ನ.28 ರಂದು ನಡೆಯಿತು.
ಸಂಜೆ ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲವನ್ ಸಪರಿವಾರ ದೈವಗಳಿಗೆ ಪುದಿಯೊಡ್ಕಲ್ ನೆರವೇರಿತು.
ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಅನಿಲ್ ಕುಂಬ್ಡಾಜೆ ಮತ್ತು ಶ್ರೀ ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ (ಉದುಮ) ರವರ ನೇತೃತ್ವದಲ್ಲಿ ದರ್ಶನ ಸೇವೆಯಾಗಿ
ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನರು, ಕುತ್ತಿಕೋಲು ತಂಬುರಾಟ್ಟಿ ಶ್ರೀ ಭಗವತಿ ಕ್ಷೇತ್ರದ ಸ್ಥಾನಿಕರು ಮತ್ತು ಕುತ್ತಿಕೋಲು ಕ್ಷೇತ್ರದ ಆಡಳಿತ ಸಮಿತಿ
ಅಧ್ಯಕ್ಷರು ಸದಸ್ಯರು, ಕುತ್ತಿಕೋಲು ಕ್ಷೇತ್ರದ ಆಲೆಟ್ಟಿ, ಅರಂತೋಡು, ಸುಳ್ಯ ಪ್ರಾದೇಶಿಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು,ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು,ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಗ್ರಾಮದ ತರವಾಡು ಮನೆಯ ಪ್ರಮುಖರು ಹಾಗೂ ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಾತ್ರಿ ಆಗಮಿಸಿದ ಎಲ್ಲರಿಗೂ ಅನ್ನ ಪ್ರಸಾದ ವಿತರಣೆಯಾಯಿತು.