ಮರ್ಕಂಜ: ದಾಸರಬೈಲು ಚನಿಯ ಭಾಗವತರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮ

0

ದಿ|ಚನಿಯ ಭಾಗವತರ ಸಂಸ್ಮರಣಾ ಸಮಿತಿ ಮತ್ತು ಮರ್ಕಂಜ ಯಕ್ಷ ಅಭಿಮಾನಿ ಬಳಗದ ಆಶ್ರಯದಲ್ಲಿ ದಾಸರಬೈಲು ಚನಿಯ ಭಾಗವತರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮ ಇತ್ತೀಚೆಗೆ ಬೊಮ್ಮಾರು ಮೂವರ್ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.


ದಿ|ಚನಿಯ ಭಾಗವತರ ಸಂಸ್ಮರಣಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ರಾವ್ ರೆಂಜಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಮತ್ತು ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಶಿಶಿಲ ಸಂಸ್ಮರಣೆ ಭಾಷಣ ಮಾಡಿದರು. ಹಿರಿಯ ಯಕ್ಷಗಾನ ಕಲಾವಿದ ಕಲ್ಲುಗುಂಡಿ ಕೊರಗಪ್ಪ ಮಣಿಯಾಣಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಜಗನ್ಮೋಹನ ರೈ ರೆಂಜಾಳ ಅಭಿನಂದನಾ ಭಾಷಣ ಮಾಡಿದರು.
ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಳಿಕೆ, ಹಿರಿಯ ಯಕ್ಷಗಾನ ಕಲಾವಿದ ಯುವರಾಜ್ ಜೈನ್ ಬಲ್ನಾಡುಪೇಟೆ, ಮರ್ಕಂಜ ಅನ್ನಪೂರ್ಣೇಶ್ವರಿ ಸಿದ್ಧಮಠದ ರಾಜೇಶ್‌ನಾಥ್‌ಜಿ, ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ದಿ|ಚನಿಯ ಭಾಗವತರ ಸಂಸ್ಮರಣಾ ಸಮಿತಿಯ ಪದಾಧಿಕಾರಿಗಳು, ಬೊಮ್ಮಾರು ಗಜಾನನ ಮಿತ್ರ ಮಂಡಳಿ ಹಾಗೂ ಬೊಮ್ಮಾರು ಮೂವರ್ ದೈವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ
ಈ ಸಂದರ್ಭದಲ್ಲಿ ಊರ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು.