ಬದ್ರು ಸ್ಸಾದಾತ್ ಸಯ್ಯಿದ್ ಕಡಲುಂಡಿ ತಂಗಳ್ ರ ದಿವ್ಯ ಹಸ್ತದಿಂದ ಉದ್ಘಾಟನೆ
ಹಲವು ಉಲಮಾ ಉಮರಾ ನೇತಾರರು ಭಾಗಿ
ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪ ನೂತನವಾಗಿ ನಿರ್ಮಾಣವಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ ‘ಗಲ್ಫ್ ಅಡಿಟೋರಿಯಂ ನ.29ರಂದು ಲೋಕಾರ್ಪಣೆಗೊಂಡಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದುರು ಸ್ಸಾದಾತ್ ಅಸ್ಸಯ್ಯದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ರವರು ಅಡಿಟೋರಿಯಂ ಅನ್ನು ಉದ್ಘಾಟಿಸಿದರು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಜೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಯವರು ಈ ಸಂಧರ್ಭ ಉಪಸ್ಥಿತರಿದ್ದರು.
ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ಕಾರ್ಯದರ್ಶಿ ಗಳಾದ ಎ.ಬಿ ಕಮಾಲ್,ಸಯ್ಯಿದ್ ಕುಂಞಿ ಕೋಯ ತಂಗಳ್,ಸಯ್ಯಿದ್ ತಾಹಿರ್ ತಂಗಳ್ ಗಾಂಧಿ ನಗರ ಜುಮಾ ಮಸ್ಜಿದ್ ಖತೀಬರಾದ ಆಶ್ರಫ್ ಖಾಮಿಲ್,ಸಲಹಾ ಸಮಿತಿ ಸದಸ್ಯರಾದ ಇಕ್ಬಾಲ್ ಎಲಿಮಲೆ, ಆನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾ ರಂಭದ ಪ್ರಚಾರ ಸಮಿತಿ ಸಂಚಾಲಕರಾದ ಇಕ್ಬಾಲ್ ಕನಕಮಜಲು, ಮುನೀರ್ ಜಟ್ಟಿಪಳ್ಳ ಅನ್ಸಾರಿಯಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಪಟೇಲ್ , ಎಸ್ ಎಂ ಹಮೀದ್,ನ ಪಂ ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೊ, ಮುಖಂಡರುಗಳಾದ ಟಿ ಎಂ ಶಹಿದ್ ತೆಕ್ಕಿಲ್, ಹಾಜಿ ಅದಂ ಕಮ್ಮಾಡಿ, ಹಾಜಿ ಮುಸ್ತಫಾ ಜನತಾ,ಹಮೀದ್ ಬೀಜ ಕೊಚ್ಚಿ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ಮೊದಲಾದವರು ಉಪಸ್ಥಿತರಿದ್ದರು.