ಬೆಳ್ಳಾರೆ ಕೆಳಗಿನ ಪೇಟೆಯ ಕೆ.ಹೆಚ್. ಅಬ್ದುಲ್ಲರ ಕೆ.ಹೆಚ್. ವೆಜಿಟೇಬಲ್ ಮತ್ತು ಕೆ.ಎಂ. ಮೊಹಮ್ಮದ್ ರವರ ಉದಯ ಚಿಕನ್ ಸೆಂಟರ್ ನಲ್ಲಿ ನ. 26ರಂದು ರಾತ್ರಿ ಕಳ್ಳತನ ನಡೆದಿದೆ.
ಕೆ.ಹೆಚ್.ವೆಜಿಟೇಬಲ್ಸ್ ನ ಹಿಂಭಾಗದ ಬಾಗಿಲಿನ ಲಾಕ್ ನ್ನು ಪಿಕ್ಕಾಸಿನ ಮೂಲಕ ಒಡೆದು ಒಳ ನುಗ್ಗಿದ ಕಳ್ಳ ಅಂದಾಜು ರೂ. 300ರಷ್ಟು ಹಣ ಕದ್ದಿರುವುದಾಗಿ ಮಾಲಕರು ತಿಳಿಸಿದ್ದಾರೆ.
ತರಕಾರಿ ಅಂಗಡಿಯ ಹಿಂಭಾಗದಲ್ಲಿರುವ ಉದಯ ಚಿಕನ್ಸ್ ನ ಹಿಂಭಾಗದಲ್ಲಿ ಕೋಳಿಗಳಿರುವ ಭಾಗದಲ್ಲಿ ಧರಿಯನ್ನು ಪಿಕ್ಕಾಸು ಹಾಕಿ ತೆರೆದು ಅಂಗಡಿಯ ಒಳ ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ರೂ 10000 ವನ್ನು ಲಪಟಾಯಿಸಿರುವುದಾಗಿ ಮಾಲಕರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಪಿಕ್ಕಾಸು ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಸುಳ್ಯದ ಪೈಚಾರಿನಲ್ಲಿ ಕಳ್ಳತನ ಮಾಡಿದ ವ್ಯಕ್ತಿಗೂ ಬೆಳ್ಳಾರೆಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಗೂ ಹೋಲಿಕೆ ಇರುವುದರಿಂದ ಒಂದೇ ವ್ಯಕ್ತಿ ಎರಡೂ ಕಡೆಗಳಲ್ಲಿ ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದೆ.