ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದು, ನಾಮಫಲಕ ಅಳವಡಿಸದ ಕೆಲವು ಅಂಗಡಿಗಳಿಗೆ ಗ್ರಾ.ಪಂ. ವತಿಯಿಂದ ದಂಡ ವಿಧಿಸಿದ ಘಟನೆ ನ.,29ರಂದು ವರದಿಯಾಗಿದೆ.
ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್, ಸಂಪಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಓಲ್ಗಾ ಡಿಸೋಜ, ಕಲ್ಲುಗುಂಡಿ ಪೊಲೀಸ್ ಹೊರಠಾಣೆಯ ಸಹಾಯಕ ಉಪನಿರೀಕ್ಷಕ ತಾರನಾಥ್, ಸಂಪಾಜೆ ಬೀಟ್ ಪೊಲೀಸ್ ರಾಜು, ಆರೋಗ್ಯ ಇಲಾಖೆಯ ಆಶಿಕ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ತಾಲೂಕು ಲೆಕ್ಕಪತ್ರ ವ್ಯವಸ್ಥಾಪಕ ರಾಜಶೇಖರ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಪ್ಪ ಅವರು ಉಪಸ್ಥಿತರಿದ್ದು, ಎಲ್ಲಾ ಅಂಗಡಿ ವ್ಯಾಪಾರಸ್ಥರು ನಾಮಫಲಕ ಅಳವಡಿಸುವಂತೆ ಸೂಚಿಸಿದಲ್ಲದೇ, ನಾಮಫಲಕ ಅಳವಡಿಸದ ಕೆಲವು ಅಂಗಡಿಗಳಿಗೆ ದಂಡ ವಿಧಿಸಿದರೆಂದು ತಿಳಿದುಬಂದಿದೆ.
ಜೊತೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ನವೀಕರಿಸಲು ಬಾಕಿಯಿರುವ ವ್ಯಾಪಾರಸ್ಥರು ಕೂಡಲೇ ವ್ಯಾಪಾರ ಪರವಾನಿಗೆ ನವೀಕರಿಸುವಂತೆ ಹಾಗೂ ತಮ್ಮ ಅಂಗಡಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.