ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು
ಪತಿ – ಪತ್ನಿಯ ಮಧ್ಯೆ ಜಗಳದಿಂದ ಬೇಸತ್ತ ಪತಿ ತನ್ನ ಪತ್ನಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನ.29ರಂದು ಸಂಜೆ ಸಂಭವಿಸಿದೆ.
ಭಾಗಮಂಡಲದ ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿರುವ ಗೋಪಾಲ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರಿಗೆ ದ.ಕ. ಸಂಪಾಜೆ ಗೂನಡ್ಕದಿಂದ ವಿವಾಹವಾಗಿತ್ತು. ಕೆಲವು ದಿನಗಳ ಹಿಂದೆ ಪತ್ನಿ ಪತಿಯೊಂದಿಗೆ ಜಗಳವಾಡಿ ಗೂನಡ್ಕದ ತನ್ನ ತವರು ಮನೆಗೆ ಬಂದಿದ್ದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪತ್ನಿಯನ್ನು ತನ್ನ ಮನೆಗೆ ಕರೆದೊಯ್ಯಲು ಗೋಪಾಲ ಅವರು ನ.29ರಂದು ಗೂನಡ್ಕಕ್ಕೆ ಬಂದಿದ್ದರೆನ್ನಲಾಗಿದೆ.
ಆದರೆ ತಾನು ಪತಿಯೊಂದಿಗೆ ಬರಲು ನಿರಾಕರಿಸಿದ ಕಾರಣ ಮನನೊಂದು ಗೋಪಾಲ ಅವರು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದರೆನ್ನಲಾಗಿದೆ. ಕೂಡಲೇ ಅವರ ಮನೆಯವರು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.