ಎಡಮಂಗಲ ಗ್ರಾ.ಪಂ. ಉದ್ಯೋಗ ಖಾತರಿ ಗ್ರಾಮಸಭೆ

0

ಎಡಮಂಗಲ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಗ್ರಾಮಸಭೆ ನ.30 ರಂದು ನಡೆಯಿತು.


ಗ್ರಾ.ಪಂ. ಅಧ್ಯಕ್ಷರಾದ ರಾಮಣ್ಣ ಗೌಡ ಜಾಲ್ತಾರು ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಶ್ರೀಮತಿ ದಿವ್ಯ ಯೋಗಾನಂದ, ಸದಸ್ಯರುಗಳಾದ ರೇವತಿ ಎಂಜೀರು, ಗೀತಾ ಮರ್ದೂರು, ವನಿತಾ ಕಾಯೆತ್ತಿಮಾರ್, ಮಾಯಿಲಪ್ಪ ಗೌಡ ಎಣ್ಮೂರು, ಮಾಧವ ಡೆಮ್ಮಾಯ್ಲ, ಪಿ.ಡಿ.ಒ. ಭವ್ಯ, ತಾಂತ್ರಿಕ ಸಹಾಯಕ ಮೋಹಿತ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


‌ಪಿ.ಡಿ.ಒ. ಭವ್ಯ ಹಾಗೂ ಅಧ್ಯಕ್ಷ ರಾಮಣ್ಣರವರು ಮಾತನಾಡಿ, ಗ್ರಾಮದ ಎಲ್ಲ ವಾರ್ಡ್ ಗಳಲ್ಲಿ ವಾರ್ಡ್ ಸಭೆಗಳನ್ನು ನಾವು ಮಾಡಿದ್ದು ಆ ಸಂದರ್ಭ ಜನರು ಉದ್ಯೋಗ ಖಾತರಿಗೆ ಅರ್ಜಿ ಸಲ್ಲಿಸಿದ್ದು, ಸುಮಾರು 140 ರಷ್ಟು ಅರ್ಜಿಗಳು ಬಂದಿವೆ. ಅದನ್ನು ಓದಿ ಹೇಳುತ್ತೇವೆ. ಗ್ರಾಮಸಭೆ ಮಂಜೂರು ಮಾಡಬೇಕು” ಎಂದು ಕೇಳಿದರು.
ತಾಂತ್ರಿಕ ಸಹಾಯಕರಾದ ಮೋಹಿತ್ ಉದ್ಯೋಗ ಖಾತರಿಯ ಮಾಹಿತಿ ನೀಡಿದರು. ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ವಾಚಿಸಲಾಯಿತು. ಬಳಿಕ ಚರ್ಚೆ ನಡೆದು ಪಟ್ಟಿಗೆ ಅನುಮೋದನೆ ನೀಡಲಾಯಿತು.

” ಕಲ್ಲೆಂಬಿಯಲ್ಲಿ ಉದ್ಯೋಗ ಖಾತರಿಯನ್ವಯ ಮಾಡಲಾಗಿರುವ ಇಂಗುಗುಂಡಿ ಸಮರ್ಪಕವಾಗಿಲ್ಲ. ಎರಡು ಅಡಿ ಆಳ ಇರಬೇಕಾದಲ್ಲಿ ಅರ್ಧ ಅಡಿ ಮಾತ್ರ ಆಗಿದೆ. ಅದಕ್ಕೆ ಬಿಲ್ ಪಾವತಿಸಲೇ ಬಾರದು” ಎಂದು ಗ್ರಾಮಸ್ಥ ಪದ್ಮನಾಭ ರವರು ಒತ್ತಾಯಿಸಿದರು.


” ಕೆಲಸ ಆಗಿದೆ. ಮಳೆಯ ಕಾರಣದಿಂದ ಈಗ ಗುಂಡಿ ಮುಚ್ಚಿರಬಹುದು” ಎಂದು ಪಿ.ಡಿ.ಒ. ಹೇಳಿದರು. ” ಕೆಲಸ ಸರಿ ಆಗಿಯೇ ಇಲ್ಲ. ಆದರೂ ಬಿಲ್ ಪಾವತಿಸಲಾಗಿದೆ. ನಿಮ್ಮ ಮೇಲೆ ನಾನು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ ” ಎಂದು ಪದ್ಮನಾಭರು ಹೇಳಿದರು. ಕೆಲಸ ಎಷ್ಟು ಆಗಿದೆಯೋ ಅಷ್ಟೆ ಹಣ ಪಾವತಿ ಮಾಡಲಾಗಿದೆ. ನಾನೂ ಚೆಕ್ ಗೆ ಸಹಿ ಹಾಕುವುದಕ್ಕಿಂತ ಮೊದಲು ಕಾಮಗಾರಿ ನೋಡಿದ್ದೇನೆ ” ಎಂದು ಅಧ್ಯಕ್ಷರು ಹೇಳಿದರು. ” ಎಂದು ನಾವು ಬೇಕಿದ್ದರೆ ಸ್ಥಳ ಪರಿಶೀಲನೆ ಮಾಡುವ ” ಪಿ.ಡಿ.ಒ. ಹೇಳಿದರು.