ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ: ಸುಮಾರು ಹತ್ತಕ್ಕೂ ಹೆಚ್ಚು ಬೈಕುಗಳನ್ನು ವಶಪಡಿಸಿಕೊಂಡ ಸುಳ್ಯ ಪೊಲೀಸರು

0

ಪ್ರಕರಣ ದಾಖಲಿಸಿ ಮತ್ತೆ ಬಿಡುಗಡೆ

ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಸಂಚಾರ ನಿಯಮಗಳನ್ನು ಉಲ್ಲಂಘಸಿ, ನಂಬರ್ ಪ್ಲೇಟ್ ತೆಗೆದು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದ ಸುಮಾರು 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡು ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸ್ ಐ ಸಂತೋಷ್ ಬಿ ಪಿ ರವರು ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿ ಸಂಭವಿಸುತಿದ್ದು ಇದರಲ್ಲಿ ಅನೇಕ ಯುವಕ, ಯುವತಿಯರ ಸಾವು ನೋವು ಗಳು ಸಂಭವಿಸಿದೆ.
ವಾಹನ ಚಾಲಕರು,ಸವಾರರು ರಸ್ತೆ ನಿಯಮವನ್ನು ಪೊಲೀಸರಿಗಾಗಿ ಮಾತ್ರ ಪಾಲಿಸದೆ ಅವರ ಜೀವ ರಕ್ಷಣೆಗಾಗಿ ಪಾಲಿಸಬೇಕಾಗಿದೆ.


ಅಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ಯಾರು ಕೂಡ ತೊಡಗಿಸಿಕೊಳ್ಳ ಬಾರದು. ವಿಶೇಷವಾಗಿ ದ್ವಿ ಚಕ್ರ ವಾಹನ ಸವಾರರು ಅವರರವರ ವಾಹನಗಳನ್ನು ಸಂಚಾರ ನಿಯಮಕ್ಕೆ ಅನುಸಾರವಾಗಿ ಇಟ್ಟುಕೊಳ್ಳಬೇಕು. ನಂಬರ್ ಪ್ಲೇಟ್ ಇಲ್ಲದೇ ಅಥವಾ ಅದನ್ನು ಕಾಣದ ರೀತಿಯಲ್ಲಿ ಬೇರೆ ಬೇರೆ ಅಕ್ಷರಗಳಿಂದ ಬರೆದದ್ದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ವಶಪಡಿಸಿಕೊಂಡು ನಿರ್ದಾಕ್ಷಣವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.